ಪಾಲುದಾರಿಕೆಯಲ್ಲಿ ವಂಚನೆ-Fraud in partnership

 Suddilive || Shivamogga

ಪಾಲುದಾರಿಕೆಯಲ್ಲಿ ವಂಚನೆ-Fraud in partnership   

Fraud, partnership


ಪಾಲುದಾರಿಕೆಯ ವ್ಯವಹಾರದಲ್ಲಿ ವ್ಯವಹಾರವನ್ನ ನಡೆಸಿದ ಪಾಲುದಾರನ ಮೇಲೆ ವಂಚನೆಯ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪಾಲುದಾರಿಕೆಯಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ. 

ಬಿ.ಕೆ ಸುರೇಶ್, ಬಸವರಾಜಪ್ಪ ಮತ್ತು ಚಂದ್ರಶೇಖರಪ್ಪ ಎಂಬುವರು ತಲಾ 5 ಲಕ್ಷ ರೂ. ಬಂಡವಾಳ ಹಾಕಿ ತ್ರಿಶೂಲ್ ಪೌಲ್ಟ್ರಿ ಫ್ರೀಡಂ ಪ್ರಾಡಕ್ಟ್ಸ್ ಎಂಬ ಸಂಸ್ಥೆಯನ್ನ ಹುಟ್ಟುಹಾಕಿ ವಿದ್ಯಾವಂತರಾಗಿದ್ದ ಚಂದ್ರಶೇಖರಪ್ಪನವರಿಗೆ ವ್ಯವಹಾರದ ಬಗ್ಗೆ ನೋಡಿಕೊಳ್ಳಲು ಜವಬ್ದಾರಿ ನೀಡಿರುತ್ತಾರೆ. 

ಆದರೆ ಚಂದ್ರಶೇಖರಪ್ಪ ಪಾಲುದಾರರಿಗೆ ವಂಚಿಸುತ್ತಿರುವ ಬಗ್ಗೆ ರೈತರಿಂದ ತಿಳಿದು ಬಂದಿರುತ್ತದೆ. ಇದರಿಂದ ವ್ಯವಹಾರದ ಬಗ್ಗೆ ಸುರೇಶ್ ರವರು ಪ್ರಶ್ನಿಸಲು ಮುಂದಾದಾಗಿ, ಆಡಿಟ್ ವರದಿ ಮತ್ತು ಪ್ರತಿ ತಿಂಗಳ ಲೆಕ್ಕ‌ಕೇಳಲು ಶುರು ಮಾಡಿದ್ದಾರೆ. ಇದಕ್ಕೆ ಸುಳ್ಳು ಲೆಕ್ಕೆ ಕೊಡಲು ಆರಂಭಿಸಿರುವುದಾಗಿ ಆರೋಪಿಸಲಾಗಿದೆ. 

ಈ ಕುರಿತು ವಿನೋಬ ನಗರದ ಪೊಲೀಸ್ ಠಾಣೆಯಲ್ಲಿ ತೀರ್ಮಾನವಾಗಿ ಸರ್ಕಾರಕ್ಕೆ ಕಟ್ಟಬೇಕಾದ ಬಾಬ್ತು ಮತ್ತು ವಂಚನೆಯ ಪ್ರಕರಣವನ್ನ ಒಪ್ಪಿಕೊಂಡಿರುವುದಾಗಿ ದೂರಿನಲ್ಲಿ ತಿಳಿದು ಬಂದಿದೆ. ಯಾದರೆ ಯಾವುದೇ ಲೆಕ್ಕಪತ್ರಗಳನ್ನಾಗಲಿ ಸರ್ಕಾರದ ಹಣಕಟ್ಟಿರುವುದಾಗಲಿ ಚಂದ್ರಶೇಖರ್ ತಿಳಿಸಿಲ್ಲ ಎಂದು ದೂರಿದ್ದಾರೆ. 

ಕೆಲ ಬಿಲ್ ಗಳ ಬಗ್ಗೆ ಕಾರಣ ಕೇಳಿದ್ದಕ್ಕೆ ಇಬ್ವರನ್ನ ಕೊಲೆ ಮಾಡುತ್ತೇನೆ ಮತ್ತು ಮನೆಗೆ ನುಗ್ಗಿ ಆಸಿಡ್ ಎರಚುವುದಾಗಿ ಧಮ್ಕಿಹಾಕಿದ್ದು ಸುರೇಶ್ ಅವರು ಚಂದ್ರಶೇಖರಪ್ಪನವರಿಂದ ಆತ್ಮರಕ್ಷಣೆ ಕೋರಿದ್ದಾರೆ. ಇವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. 

 Fraud in partnership   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close