Suddilive || Shivamogga
ಬೇಲಿ ತೆರವು-Fence clearance
ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಡಿಸಿ ಕಚೇರಿಯ ಎದುರಿನ ಮೈದಾನದ ಅಕ್ರಮ ಬೇಲಿಯನ್ನ ಪೊಲೀಸರ ಮಹಾನಗರ ಪಾಲಿಕೆಯವರು ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ. ಸಂಜೆ 7 ಗಂಟೆಯ ವರೆಗೂ ಯಾರೂ ಬೇಲಿ ಹಾಕಿದ್ದಾರೆ ಅದನ್ನ ತೆರವುಗೊಳಿಸಲು ಮುಂದೆ ಬಾರದ ಹಿನ್ನಲೆಯಲ್ಲಿ ಪೊಲೀಸರ ಮಾತಿನಂತೆ ನಡೆದುಕೊಂಡಿದ್ದಾರೆ.
ಶಿವಮೊಗ್ಗದ ಡಿಸಿ ಕಚೇರಿ ಎದುರಿನ ತೆರೆದ ಮೈದಾನಕ್ಕೆ ಬೆಲೆ ಹಾಕಿದ್ದ ಘಟನೆ ಬೇಲಿಯನ್ನ ಮಹಾನಗರ ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸಿದರು. ಪೊಲೀಸ್ ಬಿಗಿ ಭದ್ರತೆಯಲ್ಲಿ ಬೇಲಿ ತೆರವು ಕಾರ್ಯ ನಡೆದಿದೆ. ರಂಜಾನ್ ಪ್ರಾರ್ಥನೆಯ ನಂತರ ಮೈದಾನದ ಪ್ರವೇಶ ದ್ವಾರಕೆ ಬೇಲಿ ಅಳವಡಿಸಲಾಗಿತ್ತು.
ಬೇಲಿಯನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದ್ದ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಬೇಲಿತೆಗೆಯಲು ಸಂಜೆ 7:00ಯ ತನಕ ಸಮಯವಕಾಶ ಕೋರಿದ್ದರು.
ನೂರಾರು ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಬೇಲಿ ತೆರವು ಕಾರ್ಯಾಚರಣೆ ನಡೆದಿದೆ. ತೆರವುಗೊಳಿಸುವ ಮೊದಲು ಮೈದಾನದ ಸುತ್ತಮುತ್ತಲಿನ ಅಂಗಡಿ ಮುಗ್ಗಟ್ಟು ಬಂದ್ ಮಾಡಲಾಗಿತ್ತು. ಅಕ್ರಮ ಬೇಲಿ ತೆರವುಗೊಳಿಸಿದ ಮೇಲೆ ಬ್ಯಾರಿಕೇಡ್ ಹಾಕಲಾಗಿದೆ.
Fence clearance