Suddilive || Bhadravathi
ಯುವಕನ ಮೇಲೆ ಮಾರಣಾಂತಿಕ ಹಲ್ಲೆ-Fatal attack on a young man
ಭದ್ರಾವತಿಯಲ್ಲಿ ಯುವಕನೋರ್ವನ ಮೇಲೆ ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಿದ್ದಪುರ ಸರ್ಕಲ್ ನಲ್ಲಿ ಸತ್ಯರಾಜ್ ಯಾನೆ ಸತ್ಯ ಎಂಬ 28 ವರ್ಷದ ಯುವಕ ಬೈಕ್ ನಲ್ಲಿ ಬರುವಾಗ ಲಾಂಗ್ ನಿಂದ ದಾಳಿ ನಡೆಸಿದ್ದಾನೆ. ಸತ್ಯರಾಜ್ ನ ತಲೆಯನ್ನ ಸೀಳಿದೆ ಮತ್ತು ಲಂಗ್ಸ್ ಗೆ ಹೆಚ್ಚಿನ ಡ್ಯಾಮೇಜ್ ಆಗಿದೆ.
ಈ ಹಿಂದೆ ಸತ್ಯರಾಜ್ ನ ಮೇಲೆ 22 ವರ್ಷದ ಯುವಕನೊಂದಿಗೆ ಮಾತಿಗೆ ಮಾತು ಬೆಳೆದು ದ್ವೇಷಕ್ಕೆ ತಿರುಗಿತ್ತು. ಈ ದ್ವೇಷ ಸತ್ಯರಾಜ್ ನ ತಲೆಯನ್ನೇ ಸೀಳುವಂತೆ ಮಾಡಿದೆ. 22 ವರ್ಷದ ಯುವಕನ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಗೊಂಡ ಸತ್ಯರಾಜ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಸಧ್ಯಕ್ಕೆ 22 ವರ್ಷದ ಯುವಕ ಕಣ್ಮರೆಯಾಗಿರುವುದಾಗಿ ಮಾಹಿತಿ ತಿಳಿದು ಬಂದಿದೆ.
Fatal attack