ವಿವಾಹಿತ ಮಹಿಳೆಯ ಮೃತದೇಹವನ್ನ ಹೆದ್ದಾರಿಯ ಮೇಲಿಟ್ಟು ಕುಟುಂಬಸ್ಥರ ಪ್ರತಿಭಟನೆ-Family members protest

 Suddilive || Bhadravathi

ವಿವಾಹಿತ ಮಹಿಳೆಯ ಮೃತದೇಹವನ್ನ ಹೆದ್ದಾರಿಯ ಮೇಲಿಟ್ಟು ಕುಟುಂಬಸ್ಥರ ಪ್ರತಿಭಟನೆ-Family members protest after body of married woman placed on highway

Family, protest

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಶ್ವಿನಿ ಯಾನೆ ತೇಜಸ್ವಿನಿ ಮೃತ ದೇಹವನ್ನ ಅಂತ್ಯ ಕ್ರಿಯೆ ಮಾಡದೆ ಹೆದ್ದಾರಿಯ ಮೇಲೆ ಇರಿಸಿ ಕುಟುಂಬಸ್ಥರು ಪ್ರತಿಭಟಿಸಿದ್ದಾರೆ. 

ವಿವಾಹಿತ ಮಹಿಳೆ ಅಶ್ವಿನಿಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೆ ಅಶ್ವಿನಿಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಭಾಗ ಸಿಗಬೇಕೆಂದು ಸಹ ಬೇಡಿಕೆ ಇಟ್ಟು ಪ್ರತಿಭಟಿಸಲಾಗಿದೆ. 


ಕಳೆದ ರಾತ್ರಿ ಭದ್ರಾವತಿ ತಾಲೂಕು ಹುಣಸೇಕಟ್ಟೆ ಜಂಕ್ಷನ್‌ನಲ್ಲಿ ಅಶ್ವಿನಿ ಯಾನೆ ತೇಜಸ್ವಿನಿ (27) ಎಂಬ ಗೃಹಿಣಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗಂಡ ಮನೆಗೆ ಮರಳಿದಾಗ ಅಶ್ವಿನಿ ನೇಣು ಬಿಗಿದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಅಶ್ವಿನಿಯದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆಯ ಕುಟುಂಬದವರು ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಬೆನ್ನಲ್ಲೇ ಅಶ್ವನಿಯ ಗಂಡ ಪ್ರಮೋದ್ ಮತ್ತು ಮಾವನನ್ನ ಪೊಲೀಸರು ಬಂದಿಸಿದ್ದರು.  

ಹುಣಸೇಕಟ್ಟೆ ಜಂಕ್ಷನ್‌ನಲ್ಲಿ ರಸ್ತೆಯ ಮೇಲೆ ಅಶ್ವಿನಿಯ ಮೃತದೇಹವನ್ನು ಇರಿಸಿ ಪ್ರತಿಭಟನೆ  ನಡೆಸಲಾಗಿದೆ. ಅಶ್ವಿನಿಯ ಕುಟುಂಬದವರು, ಸಂಬಂಧಿಕರು, ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

Family members protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close