suddilive || Shivamogga
ಈದ್ಗಾ ನಮ್ಮದು-ಸುನ್ನಿ ಜಾಮೀಯ ಮಸೀದಿ- Eidgha field belongs to us - Sunni Jamia Masjid
ಈದ್ಗಾ ಮೈದಾನದಲ್ಲಿ ಎರಡು ದಿನಗಳಲ್ಲಿ ಎರಡು ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ನಿನ್ನೆ ಜಾಮೀಯ ಮಸೀದಿ ಮತ್ತು ಜಿಲ್ಲಾಧಿಕಾಗಳ ನಡುವೆ ಸಭೆ ನಡೆದಿದೆ. ಈದ್ಗಾ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಚರ್ಚೆ ನಡೆದ ಬೆನ್ನಲ್ಲೇ ದಾಖಲೆಗಳ ಪರಿಶೀಲನೆಗಾಗಿ ಎರಡು ದಿನ ಮೈದಾನದಲ್ಲಿ ಸಾರ್ವಜನಿಕರ ಪಾರ್ಕಿಂಗ್ ವ್ಯವಸ್ಥೆಯನ್ನ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಈದ್ಗಾ ಸಮಿತಿ ಮೊನ್ನೆ ಹಾಕಲಾದ ಬೇಲಿಯ ತೆರವಿಗೆ ಹಿಂದೂ ಸಂಘಟನೆಗಳು ಹೋರಾಟ ನಡೆಸಿರುವುದು ಶಾಂತಿಯುತವಾಗಿರುವ ಶಿವಮೊಗ್ಗವನ್ನ ಅಶಾಂತಿ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದೆ.
ಈ ಮೈದಾನವು ಗಾಂಧಿ ಬಜಾರ್ ನ ಮರ್ಕಜ್ ಸುನ್ನಿ ಜಾಮೀಯಾ ಮಸೀದಿಗೆ ಸೇರಿದೆ. ಇದರ ನಿರ್ವಹಣೆಯನ್ನ ಜಾಮೀಯ ಮಸೀದಿ ನಡೆಸುತ್ತಿದೆ.
ಈ ಜಾಗದಲ್ಲಿ ಅನೈತಿಕ ಚಟುವಟಿಕೆಗಳಿಗೆ ತಿರುಗುತ್ತಿದ್ದು ಈ ಸ್ಥಳ ಮುಸ್ಲೀಂರಿಗೆ ಪವಿತ್ರ ಸ್ಥಳವಾಗಿದ್ದು, ಪ್ರತಿ ವರ್ಷ ಸ್ವಚ್ಛಗೊಳಿಸಲು ಲಕ್ಷಾಂತರ ರೂ. ವ್ಯಯವಾಗುತ್ತಿದೆ. ಈ ಕುರಿತು ಹಲವುಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ನಿನ್ನೆ ಕೆಲವರು ಈದ್ಗ ಮೈದಾನದ ಒಳಗೆ ಅತಿಕ್ರಮಣ ಮಾಡಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಕಟಿಮಿಯು ಸಿಸಿ ಟಿವಿ ಅಳವಡಿಸಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಈ ಜಾಗದಲ್ಲಿ ಡಿಸಿ ವಕ್ಫ್ ಸಂಸ್ಥೆಗಳ ಟಾಸ್ಕ್ ಫೋರ್ಸ್ ಮುಖ್ಯಸ್ಥರುಗಳಾಗಿದ್ದು, ವಾಹನ ನಿಲುಗಡೆಯನ್ನ ಸ್ಥಗಿತಗೊಳಿಸಿ ಸೂಕ್ತ ರಕ್ಷಣೆ ನೀಡುವಂತೆ ಸಂಘಟನೆ ಮನವಿ ಮಾಡಿದ್ದು ಅದರಂತೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಸೀದಿ ಕಮಿಟಿಯ ಅಧ್ಯಕ್ಷ ಮುನಾವರ ಪಾಷ, ವಕೀಲರಾದ ಸಿದ್ದಿಕಿ, ನಯಾಜ್ ಮೊದಲಾದವರು ಉಪಸ್ಥಿತರಿದ್ದರು.
Eidgha field belongs to us - Sunni Jamia Masjid