ಈದ್ಗಾ ನಮ್ಮದು-ಮರ್ಕಜ್ ಸುನ್ನಿ ಜಾಮೀಯಾ ಮಸೀದಿ-Eidgah Nammadu

Suddilive/Shivamogga

 ಈದ್ಗಾ ನಮ್ಮದು-ಮರ್ಕಜ್ ಸುನ್ನಿ ಜಾಮೀಯಾ ಮಸೀದಿ- Eidgah Nammadu Markaz Sunni Jamia Masjid

Edgha, nammadu


ಶಿವಮೊಗ್ಗ ಜಿಲ್ಲಾಧಿಕಾರಿ ಎದುರಿನ ಮೈದಾನ ವಿವಾದಿತ ಸ್ಥಳವಾದಂತೆ ಪರಿವರ್ತನೆಗೊಂಡಿದೆ. ನಿನ್ನೆ ಅಕ್ರಮ‌ಬೇಲಿ ತೆರವಿಗೆ ಹಿಂದೂ ಸಂಘಟನೆಗಳು ಹೋರಾಟ ನಡೆಸಿದರೆ ಇಂದು ಮರ್ಕಜ್ ಸುನ್ನಿ ಜಾಮೀಯ ಮಸ್ಜಿದ್ ನೇತೃತ್ವದಲ್ಲಿ ಮುಸ್ಲೀಂ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ಕುಳಿತಿವೆ.

ಮೈದಾನದ ಸುತ್ತ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಮೈದಾನದ ಎದುರಿನ ದರ್ಗಾ ಕಾಂಪ್ಲೆಕ್ಸ್ ನ ಮಳಿಗೆಗಳನ್ನ ಬಂದ್ ಮಾಡಿಸಲಾಗಿದೆ. ಮೈದಾನವು ಗಾಂಧಿ ಬಜಾರ್ ನ ಮರ್ಕಜ್ ಸುನ್ನಿ ಜಾಮೀಯಾ ಮಸೀದಿಗೆ ಸೇರಿದೆ. ಇದರ ನಿರ್ವಹಣೆಯನ್ನ ಜಾಮೀಯ ಮಸೀದಿ ನಡೆಸುತ್ತಿದೆ ಎಂದು ಸಂಘಟನೆಗಳು ಮನವಿಯಲ್ಲಿ ತಿಳಿಸಿದೆ. 

ಈ ಜಾಗದಲ್ಲಿ ಅನೈತಿಕ ಚಟುವಟಿಕೆಗಳಿಗೆ ತಿರುಗುತ್ತಿದ್ದು  ಈ ಸ್ಥಳ ಮುಸ್ಲೀರಿಗೆ ಪವಿತ್ರ ಸ್ಥಳವಾಗಿದ್ದು, ಪ್ರತಿ ವರ್ಷ ಸ್ವಚ್ಛಗೊಳಿಸಲು ಲಕ್ಷಾಂತರ ರೂ. ವ್ಯಯವಾಗುತ್ತಿದೆ. ಈ ಕುರಿತು ಹಲವುಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

ನಿನ್ನೆ ಕೆಲವರು ಈದ್ಗ ಮೈದಾನದ ಒಳಗೆ ಅತಿಕ್ರಮಣ ಮಾಡಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಕಟಿಮಿಯು ಸಿಸಿ ಟಿವಿ ಅಳವಡಿಸಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಈ ಜಾಗದಲ್ಲಿ ಡಿಸಿ ವಕ್ಫ್ ಸಂಸ್ಥೆಗಳ ಟಾಸ್ಕ್ ಫೋರ್ಸ್ ಮುಖ್ಯಸ್ಥರುಗಳಾಗಿದ್ದು, ವಾಹನ ನಿಲುಗಡೆಯನ್ನ ಸ್ಥಗಿತಗೊಳಿಸಿ ಸೂಕ್ತ ರಕ್ಷಣೆ ನೀಡುವಂತೆ ಸಂಘಟನೆ ಆಗ್ರಹಿಸಿದೆ. 

ಪ್ರತಿವಟನೆಯಲ್ಲಿ ಮಸೀದಿ ಕಮಿಟಿಯ ಅಧ್ಯಕ್ಷ ಮುನಾವರ ಪಾಷ, ಎಂಡಿ ಶರೀಫ್, ಜಿಲಾನ್ ಖಾನ್, ಸೈಫುಲ್ಲಾ ಇಮ್ರಾನ್  ಮೊದಲಾದವರು ಉಪಸ್ಥಿತರಿದ್ದರು.

Eidgah Nammadu 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close