ಅಜಿತ್ ಗೌಡರಿಂದ ದಿಡೀರ್ ರಸ್ತೆ ತಡೆ-Didir road block by Ajit Gowda

Suddilive || Bhadravathi

ಅಜಿತ್ ಗೌಡರಿಂದ ದಿಡೀರ್ ರಸ್ತೆ ತಡೆ-Didir road block by Ajit Gowda

Didir, roadblock


ಬೈಕ್ ಮೇಲೆ ತೆರಳುತ್ತಿದ್ದವರಿಗೆ ಕಿಗೇಡಿಗಳು ಬಾಟಲಿಯಿಂದ ಹಲ್ಲೆ ನಡೆಸಿರುವುದನ್ನು ಖಂಡಿಸಿ ಹಲ್ಲೆಗೊಳಗಾದ ಮತ್ತು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಯುವಕರು ಭದ್ರಾವತಿ ನಗರಸಭೆ ಕಚೇರಿಯ ಕೂದಲಳತೆ ದೂರದ ಮುಂಭಾಗದ ರಸ್ತೆಯಲ್ಲಿ ಸುಮಾರು‌ ಒಂದು ತಾಸಿಗೂ ಹೆಚ್ಚುಕಾಲ ನಡುರಾತ್ರಿಯಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. 

ಜೆಡಿಎಸ್ ನಾಯಕ ಅಜಿತ್ ಗೌಡ ಮತ್ತು ಅವರ ತಾಯಿ ಶಾರದಾ ಅಪ್ಪಾಜಿಗೌಡ  ರಾತ್ರೋರಾತ್ರಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮತ್ತು ಹಲ್ಲೆಗೊಳಗಾದವರ ಜೊತೆಗೂಡಿ ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಸಾಥ್ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವ ಜನತೆ ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಹರಸಾಹಸ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪ್ರಾಥಮಿಕ ಮಾಹಿತಿ ಇಷ್ಟು ಲಭಿಸಿದ್ದು ತನಿಖೆ ನಂತರ ನಿಖರವಾದ ಮಾಹಿತಿ ಪೊಲೀಸರಿಂದಲೇ ತಿಳಿಯಬೇಕಿದೆ.

Didir road block by Ajit Gowda

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close