Suddilive || Shivamogga
ರಿಕ್ಕಿ ರೈ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳನ್ನ ಕೂಡಲೆ ಬಂಧಿಸುವಂತೆ ಆಗ್ರಹ-Demand for immediate arrest of the perpetrators who shot at Rikki Rai
ಬೆಂಗಳೂರಿನಲ್ಲಿ ಡಾನ್ ದಿ.ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ದುರ್ಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿ ನಡೆಸಿದ ದುಷ್ಕರ್ಮಿಗಳನ್ನ ಕೂಡಲಾಎ ಬಂಧಿಸ ಬೇಕೆಂದು ಆಗ್ರಹಿಸಿ ಇಂದು ಜಯ ಕರ್ನಾಟಕ ಸಂಘಟನೆ ಇಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆಗೆ ಮನವಿ ಮಾಡಿದ್ದಾರೆ.
ಜಯ ಕರ್ನಾಟಕ ಸಂಘಟನೆಯು ಕನ್ನಡ ನಾಡಿನ ನಾಡು, ನುಡಿ, ನೆಲ, ಜಲ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಳು, ಜನಪರ ಹೋರಾಟಗಳನ್ನು ಮಾಡುತ್ತಾ ರಾಜ್ಯದಲ್ಲಿ ಸಕ್ರಿಯವಾಗಿದೆ. ಇಂತಹ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ರವರ ಸುಪುತ್ರ ರಿಕ್ಕಿ ರೈ ರವರ ಮೇಲೆ ಶೂಟ್‌ಔಟ್ ಮಾಡಿ ಕೊಲೆ ಯತ್ನ, ಮಾಡಿರುವುದು ಖಂಡನೀಯ ಎಂದು ಸಂಃಟನೆ ಆಗ್ರಹಿಸಿದೆ.
ಘಟನೆ ನೆಡೆದು ನಾಲ್ಕು ದಿನಗಳು ಕಳೆದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ, ದಯಮಾಡಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರದ ವತಿಯಿಂದ ಅಕ್ಕಿ ರೈ ರವರಿಗೆ ಸೂಕ್ತ ಭದ್ರತೆ ನೀಡಬೇಕು.
ಒಂದು ವೇಳೆ ಸೂಕ್ತ ಕ್ರಮ ಕೈ ಗೊಳ್ಳದೇ ಹೋದರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಸಂಘಟನೆ ಎಛಚರಿಸಿದೆ.
ಸಂಘಟನೆಯ ಜಿಲ್ಲಾಧ್ಯಕ್ಷೆ ನಾಜೀಮಾ, ಸಾಗರ ತಾಲೂಕು ಅಧ್ಯಕ್ಷೆ ರೇಖಾ, ಪುಷ್, ಲತಮ್ಮ, ಜಯ, ಭಾಗಮ್ಮ ಮೊದಕಾದವರು ಮನವಿ ನೀಡುವ ವೇಳೆ ಉಪಸ್ಥಿತರಿದ್ದರು.
Demand for immediate arrest