ಡಿಸಿಸಿ ಬ್ಯಾಂಕ್ ಐತಿಹಾಸಿಕ ಲಾಭ ಮಾಡಿದೆ-ಆರ್ ಎಂ ಎಂ- DCC Bank has made historic profits-RMM

 suddilive || Shivamogga

ಡಿಸಿಸಿ ಬ್ಯಾಂಕ್ ಐತಿಹಾಸಿಕ ಲಾಭ ಮಾಡಿದೆ-ಆರ್ ಎಂ ಎಂ- DCC Bank has made historic profits-RMM   

DCC, Bank


72 ವರ್ಷದಿಂದ ಡಿಸಿಸಿ ಬ್ಯಾಂಕ್ ಶಿವಮೊಗ್ಗ ಆರಂಭವಾಗಿ  ಮೊದಲಬಾರಿಗೆ 46 ಕೋಟಿ ಲಾಭ ಮಾಡಿದೆ ಇತಿಹಾಸ ರಚಿಸಲಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 17೦೦ ಡಿಪಾಸಿಟ್ 151 ಕೋಟಿ ಶೇರು, 2600 ಕೋಟಿ ಸ್ವಂತ ಬಂಡವಾಳ, 0.8 ಎನ್ ಪಿ ಎ ಇದೆ. ಆರ್ ಬಿ ಐ ಮತ್ತು ನಬಾರ್ಡ್ ಅಡಿಯಲ್ಲಿ ಇವನ್ಬೆಲ್ಲ ಸಾಧಿಸಲಾಗಿದೆ. 1200 ಕೋಟಿ ಬೆಳೆಸಾಲದಲ್ಲಿ ಶೇ.99 ಮರು ಪಾವತಿ ಆಗಿದೆ. ಸ್ವಸಹಾಯ ಗುಂಪು ಸಾಲ  ಕೊಡಲಾಗಿದೆ. ನೌಕರರಿಗೆ ಆರೋಗ್ಯ ವಿಮೆ, 7 ನೇ ವೇತನ ಜಾರಿ ಮಾಡಲಾಗಿದೆ ಎಂದರು. 

ಕಳೆದ ಐದಾರು ವರ್ಷದಲ್ಲಿ ಮೂರು ಶಾಖೆ ಆರಂಭಿಸಲಾಗಿದೆ. ಈಗ ಮತ್ತೆ ಐದು ಶಾಖೆಗಳಿಗೆ ಅನುಮತಿ ದೊರೆಯುತ್ತಿದೆ.  ತೀರ್ಥಹಳ್ಳಿ ಎಪಿಎಂಸಿ ತ್ಯಾಗರ್ತಿ, ಬಾರಂದೂರು ಮತ್ತು ನಗರದಲ್ಲಿ ಶಾಖೆ ಆರಂಭಿಸಲಾಗುತ್ತಿದ್ದು, ಒಂದೇ ವರ್ಷದಲ್ಲಿ 8ಶಾಖೆ ಚಾಲನೆ ನೀಡಲಾಗುತ್ತಿದೆ. ಹೊಸ ಶಾಖೆಗಳ ಆರಂಭಕ್ಕೆ ಬೇಡಿಕೆ ಇದೆ. ಹೊಸನಗರದಲ್ಲಿ ಬೇಡಿಕೆ ಹೆಚ್ಚಿದೆ ಕೆನರಾ ಬ್ಯಾಂಕ್ ಸೇವೆ ಬಗ್ಗೆ ಅಲ್ಲಿನ ಜನ ಅಸಮಾಧಾನವಿದೆ ಎಂದರು. 

ಫೋನ್ ಪೇ ಗೂ ಡಿಸಿಸಿ ಬ್ಯಾಂಕ್ ನ ಟ್ರಯಲ್ ಆರಂಭವಾಗಿದೆ. ಒಂದು ವರ್ಷದ ಒಳಗೆ ಇದು ಫೋನ್ ಪೇ ಸಿಗಲಿದೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಇರುವ ಸೇವಾಸೌಲಭ್ಯ ಡಿಸಿಸಿ ಬ್ಯಾಂಜ್ ಗೆ ಸಿಗಲಿದೆ. 1 ಲಕ್ಷದ 30 ಸಾವಿರ ಬೆಳೆ ಸಾಲ ನೀಡಲು ತೀರ್ಮಾನಿಸಲಾಗಿದೆ. ಸ್ವಸಹಾಯ ಗುಂಪುಗಳಿಗೆ ಸಾಲ ಕೊಡಲು ತೀರ್ಮಾನಿಸಲಾಗಿದೆ. 

ಎತಡು ವರ್ಷದಲ್ಲಿ ವಜ್ರ ಮಹೋತ್ಸವ ಆಚರಿಸಲಿದ್ದೇವೆ. ಕಲ್ಮನೆ ಸೊಸೈಟಿಗೆ ಐದಾರು ತಿಂಗಳು ಸಮಯ ನೀಡಲಾಗಿತ್ತು. ಜನ ಠೇವಣಿ ಹಿಂಪಡೆದಿದ್ದರು 75% ವಾಪಾಸ್ ನೀಡಿದ್ದಾರೆ. ಕ್ರಮ ಕೈಗೊಳ್ಳಲಾಗುವುದು. ಸಮಯಬೇಕಿದೆ. ಹಣ ವಾಪಾಸ್ ಬರಬೇಕು ಅದು ತನಿಖೆಯಲ್ಲಿ ಗೊತ್ತಾಗಬೇಕಿದೆ ಎಂದರು. 

12 ಕೋಟಿ ಕಳೆದ ಬಾರಿ ಡಿಸಿಸಿ ಬ್ಯಾಂಕ್ ಲಾಭವಿತ್ತು. ಈ ಬಾರಿ 46 ಕೋಟಿ ಲಾಭಬಂದಿದೆ. ಬೆಳೆ ಸಾಲ ಮನ್ನ ಆಗೊಲ್ಲ. ಶುಗರ್ ಫ್ಯಾಕ್ಟರಿ ಸಾಲ ವಸೂಲಾತಿ ಆಗಿದೆ 80 ಕೋಟಿ ಕೊಡಲಾಗಿತ್ತು. ವಸೂಲಾಗಿದೆ. ದಕ್ಷಿಣ ಕನ್ನಡ ಮತ್ತು ಉ್ತರ ಕನ್ನಡದವರು ಸಾವಿರ ಕೋಟಿ ಸಾಲ ಕೊಟ್ಟಿದ್ದಾರೆ. ನಾವೇ 13% ಬಡ್ಡಿಗೆ ಕೊಡಲಾಗಿದೆ. 

ಸಹಕಾರಿ ಶುಗರ್ ಫ್ಯಾಕ್ಟರಿಗಳು ನಷ್ಟವಾಗಿದೆ. ಖಾಸಗಿ ಫ್ಯಾಕ್ಟರಿ ಲಾಭದಲ್ಲಿವೆ. ಶೂನ್ಯ ಬಡ್ಡಿದರದಲ್ಲಿ ಅಲ್ಫಾವಧಿ ಕೃಷಿ ಬೆಳೆ ಸಾಲ, ಶೇ.3 ರಷ್ಟು ಬಡ್ಡಿದರದಲ್ಲಿ 1000 ರೈತರಿಗೆ 100 ಕೋಟಿ ಮಧ್ಯಮಾವಧಿ ಕೃಷಿ ಸಾಲ ಹಂಚಿಕೆ, 2025-26 ನೇ ಸಾಲಿನಲ್ಲಿ 2000 ಕೋಟಿ ಠೇವಣ, 2026 ಮಾರ್ಚ್ವ 2026 ರ ಅಂತ್ಯಕ್ಕೆ 60 ಕೋಟಿ ಲಾಭಗಳಿಸುವ ಗುರಿ ಹೊಂದಿದೆ ಎಂದರು.

DCC Bank has made historic profits-RMM

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close