Suddilive || Shivamogga
ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯಗಳನ್ನ ನಡೆಸುವ ಗುತ್ತಿಗೆದಾರರಿಂದ ಸುಲಿಗೆ ನಡೆಯುತ್ತಿದೆ. ಶೌಚಾಲಯಕ್ಕೆ ಬರುವ ಮಹಿಳಾ ಪ್ರಯಾಣಿಕರಿಗೆ ಶೌಚಾಲಯದಲ್ಲಿ ನೀರಿಲ್ಲ ಹಾಗಾಗಿ 10 ರೂ. ಶುಲ್ಕ ವಸೂಲಿ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ.
ಒಂದು ವರೆ ತಿಂಗಳ ಹಿಂದಷ್ಟೆ ಉಪಲೋಕಾಯುಕ್ತ ಫಣೀಂದ್ರ ಭೇಟಿ ಮಾಡಿದ ವೇಳೆ ಎಲ್ಲವೂ ಸರಿಯಿದೆ ಎಂದು ಬಿಂಬಿಸಲಾಗಿತ್ತು. ಇಲ್ಲಿನ ಸಿಸಿ ಟಿವಿಗಳು, ಶೌಚಾಲಯದಲ್ಲಿ ಹಣ ವಸೂಲಿ ಇಲ್ಲವೆಂದು ಬಿಂಬಿಸಿ ಶಭ್ಬಾಶ್ ಗಿರಿ ಗಿಟ್ಟಿಸಿಕೊಂಡ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ವೀಡಿಯೋ ನೋಡಿ ಏನು ಹೇಳ್ತಾರೆ ಎಂಬ ಕುತೂಹಲ ಹೆಚ್ಚಿದೆ.
ಉಪಲೋಕಾಯುಕ್ತರ ಭೇಟಿ ವೇಳೆ ತೆಗೆದ ತೀರ್ಮಾನಗಳನ್ನ ಇಲ್ಲಿನ ಲೋಕಾಯುಕ್ತರು ಸರಿಯಾಗಿ ಫಾಲೋ ಮಾಡುತ್ತಿದ್ದಾರಾ ಎಂಬ ಅನುಮಾನವೂ ಹೆಚ್ಚಿದೆ. ಒಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಲಂಗು ಲಗಾಮು ಗಳಿಲಗಲವೆಂಬುದು ಸ್ಪಷ್ಟವಾಗಿದೆ.
ಘಟನೆ ನಡೆದಿದ್ದು ಇಷ್ಟು!
ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಬಸ್ ಸ್ಟಾಂಡ್ ಒಳಗಡೆ ಅಂದರೆ ಹೊರ ಊರಿನಿಂದ ಬರುವ ಬಸ್ ಗಳು ಪ್ರಯಾಣಿಕರನ್ನ ಬಿಡುವ ಜಾಗದಲ್ಲಿರುವ ಶೌಚಾಲಯಕ್ಕೆ ಇಂದು ಮಹಿಳೆ ಪ್ರಯಾಣಿಕರು ಮತ್ತು ಕುಟುಂಬ ಶೌಚ್ಯಕ್ಕೆ ತೆರಳಿದೆ.
ಶೌಚಾಲಯದಲ್ಲಿ ಮಹಿಳಾ ಪ್ರಯಾಣಿಕರಿಗೆ ಮಲ ಮೂತ್ರ ವಿಸರ್ಜನೆಗೆ ಶೌಚಾಲಯ ಸಿಬ್ಬಂದಿ ನೀರು ಇಲ್ಲದಾಗಿದೆ ಹಾಗಾಗಿ 10₹ ಪಾವತಿಸಿ ಎಂದು ಪ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡಿದೆ. ಅದರಂತೆ ಕುಟುಂಬದೊಂದಿಗೆ ಬಂದಿದ್ದವರೊಂದಿಗೆ ಶೌಚಾಲಯ ಸಿಬ್ಬಂದಿಯೊಂದಿಗೆ ಕೆಲಕಾಲ ಜಗಳ ನಡೆಸುದ್ದಾರೆ, ಶೌಚಾಲಯ ಸಿಬ್ಬಂದಿ, ಇದು ನಾನು ನಿರ್ಮಿಸಿರುವ ಶೌಚಾಲಯ ಎಂದು ವಾಗ್ವದಕ್ಕೆ ಇಳಿದಿದ್ದು ತದ ನಂತರ ಜಗಳ ಮಾಡಿದ ಪ್ರಯಾಣಿಕರು ಅಸಹಾಯಕರಾಗಿ ಆತ ಹೇಳಿದ ಹಣ ನೀಡಿ ವಾಅಸ್ ಆಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ನೀರಿಲ್ಲ ಹಾಗಾಗಿ ಶೌಚಾಲಯ ಬಳಸುವುದಕ್ಕೆ 10₹ ಪಾವತಿ ಮಾಡಿ ಎಂದು ಬೋರ್ಡ್ ಹಾಕಿ ಎಂದು ಬಂದಂತ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಯಾಕೆ ಆಗಿದೆ, ಯಾಕೆ ನೀರಿನ ಸಮಸ್ಯೆ ಆಗಿದೆ ಎಂಬ ವಿಚಾರ ತಿಳಿದು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕಾಗಿದೆ.
Contractor brags about toilet