suddilive || Shivamogga
ಹಿಂದೂಗಳ ಮೇಲೆ ಕೈಯಿಡಲು ಹೋಗುವ ಕಾಂಗ್ರೆಸ್ ಭಸ್ಮ ಪ್ರದರ್ಶನ-ಕಾಂತೇಶ್-Congress's ash show to lay hands on Hindus-Kantesh
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಶಿವಮೊಗ್ಗದಲ್ಲಿ ಜನಿವಾರ ತೆಗೆಯಿಸಿದ ಘಟನೆಯನ್ನ ಖಙಡಿಸಿ ಇಂದು ರಾಷ್ಟ್ರಭಕ್ತರ ಬಳಗ ಕೆ.ಈ.ಕಾಂತೇಶ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜನಿವಾರವನ್ನ ತೆಗೆಯಿಸುವುದು ಅಶುಭವಾದಾಗ ಮಾತ್ರ. ಕಾಂಗ್ರೆಸ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ನಡುವೆ ಮಾತಬಾಡಿದ ಕೆ.ಈ ಕಾಂತೇಶ್ ಹಿಂದೂ ವಿರೋಧಿ ಕಾಂಗ್ರೆದ್ ಸರ್ಕಾರ ಬಂದ ನಂತರ ಹಿಂದೂಗಳ ಮೇಲೆ ಗದಾಪ್ರಹಾರ ಮೊದಲಲ್ಲ. ವಕ್ಫ್ ಮುಸ್ಲೀಂರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಠೀಕರಣ ಮಾಡಲಾಗುತ್ತಿದೆ.
ಹಿಂದೂಗಳ ಮೇಲೆ ಕೈಇಡಲು ಹೋದರೆ ಭಸ್ಮವಾಗುತ್ತೀರಿ. ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಯಿಸಿ ಭಾವನೆಗಳ ಮೇಲೆ ಆಟಾಡಲು ಹೊರಟಿದ್ದೀರಿ. ಮಂಗಳವಾರದ ವರೆಗೆ ಗಡವು ನೀಡಲಾಹುತ್ತದೆ. ಸಿಇಟಿ ಪರೀಕ್ಷೆ ವಂಚಿತ ವಿದ್ಯಾರ್ಥಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಮತ್ತು ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದರು.
Congress's ash show to lay hands on Hindus-Kantesh