ಸೌದೆ ಸುಡುವ ಮೂಲಕ ಕಾಂಗ್ರೆಸ್ ಬೆಲೆ ಏರಿಕೆಯ ಪ್ರತಿಭಟನೆ-Congress protests price hike

 Suddilive || Shivamogga

ಸೌದೆ ಸುಡುವ ಮೂಲಕ ಕಾಂಗ್ರೆಸ್ ಬೆಲೆ ಏರಿಕೆಯ ಪ್ರತಿಭಟನೆ-Congress protests price hike by burning firewood

Congress, protest

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸರ್ಕಾರ ಶಿವಪ್ಪ ನಾಯಕ ವೃತ್ತದಿಂದ ಗೋಪಿ ವೃತ್ತದ ವರೆಗೆ ಪ್ರತಿಭಟನೆ ನಡೆಸಿತು. 

ಗ್ಯಾಸ್ ಸಿಲಿಂಡರ್ ಪ್ಲಕಾರ್ಡ್ ನ್ನ ಹಿಡಿದುಕೊಂಡು ಬಂದ ಕಾಂಗ್ರೆಸ್ ಕಾರ್ಯಕರ್ತರು ಗೋಪಿ ವೃತ್ತದಲ್ಲಿ ಕಟ್ಟಿಗೆಯನ್ನ ಸುಡುವ ಮೂಲಕ ಉಜ್ವ ಯೋಜನೆ ಅಡಿ ಗ್ಯಾಸ್ ದರವನ್ನ 50 ರೂ.ಗಳ ಏರಿಕೆ ಮಾಡಲಾಗಿದೆ. ಉಜ್ವಲ ಯೋಜನೆ ತಂದಿರುವುದೇ ಕಟ್ಟಿಕೆಯನ್ನ ಬಿಡಿಸಿ ಗ್ಯಾಸ್ ಬಳಕೆ ಮಾಡಲು ಉತ್ತೇಜನ ನೀಡುವ ಯೋಜನೆಯಾಗಿದೆ. 

ಈ ಯೋಜನೆಯಲ್ಲೇ 50 ರೂ. ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಬಡವರಿಗೆ ಗಾಯದ ಮೇಲೆ ಬರೆ ಹಾಕಿದೆ ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಎಂಎಲ್ ಸಿ ಬಲ್ಕಿಸ್ ಭಾನು, ಪದ್ಮನಾಭ, ಶಿ.ಜು.ಪಾಶ, ಎಸ್ಪಿ ಶೇಷಾದ್ರಿ, ಯುವಕಾಂಗ್ರೆಸ್ ನ ಗಿರೀಶ್, ಮಧು ಮೊದಲಾದವರು ಉಪಸ್ಥಿತರಿದ್ದರು. 

Congress protests price hike

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close