Suddilive || Shivamogga
ದರ ಏರಿಕೆಯೊಂದಿಗೆ ಕಾಂಗ್ರೆಸ್ ಜನರ ರಕ್ತ ಹೀರುತ್ತಿದೆ-ಶಾಸಕ ಚೆನ್ನಿ -Congress is sucking people's blood with price hikes - MLA Chenni
ಕಾಂಗ್ರೆಸ್ ಸರ್ಕಾರ ದುರ್ಬುದ್ದಿಯನ್ನ ಮುಂದುವರೆಸಿದ್ದು, ಬೆಲೆ ಏರಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ನಂಬರ್ ಒನ್ ಎನಿಸಿಕೊಳ್ಳಲು ಮುಂದಾಗಿದೆ ಎಂದು ಶಾಸಕ ಚೆನ್ನಬಸಪ್ಪ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲಿನದ ದರ ಏರಿಸಿ ರೈತರಿಗೆ ಹಣ ಕೊಡುವುದಾಗಿ ಗ್ರಾಹಕರ ಜೇಬಿಗೆ ಕತ್ತರಿಹಾಕಿದೆ. ಒಂದು ವರ್ಷದಲ್ಲಿ 9 ರೂ. ಹೆಚ್ಚಿಸಿದೆ. ಒಂದು ಲೀಟರ್ ಹಾಲಿಗೆ 50 ಎಂಎಲ್ ಹಾಲು ಕೊಡುವುದಾಗಿ ಈ ಹಿಂದೆ 2 ರೂ. ಹೆಚ್ಚಿಸಿತ್ತು. ಈಗ 4 ರೂ. ಏರಿಸಿ 50 ಎಂ ಎಲ್ ಹಾಲು ಕಟ್ ಮಾಡಿದೆ. ಇದು ಅಕ್ಷಮ್ಯವಾಗಿದೆ.
ಎಲ್ಲದರಲ್ಲೂ ದರ ಹೆಚ್ಚಿಸುವುದು ಕಾಂಗ್ರೆಸ್ ನ ಹಿಡನ್ ಅಜೆಂಡಾ ಆಗಿದೆ ವಾಹನ ನೋಂದಣಿ 10% ಹೆಚ್ಚಳ, ಆರೋಗ್ಯದ ಸೇವೆಯಲ್ಲಿ ಹೆಚ್ಚಳ, ಸರ್ಕಾರಿ ಶಾಲಾ ಶುಲ್ಕಗಳನ್ನ 10% ಹೆಚ್ಚಿಸಿದೆ. ಮೆಟ್ರೋ ದರ 50%, ಎಲೆಕ್ಟ್ರಿಕ್ ದರ್ 10% ನೀರಿನ ಶುಲ್ಕ 30% ಆಸ್ತಿ ದರವನ್ನ 50%, ಬೀಜದ ಬೆಲೆ 60% ಮದ್ಯದ ಬೆಲೆ 45% ಹೆಚ್ಚಿಸಿದೆ. ಇದು ಕಾಂಗ್ರೆಸ್ ನ ದುರ್ನೀತಿಯಾಗಿದೆ ಎಂದು ತಿಳಿಸಿದರು.
ಯುಗಾದಿಯ ಹೊಸದಿನಗಳಲ್ಲಿ ಗ್ರಾಹಕರ ಜೇಬಿಗೆ ಕತ್ತರಿಹಾಕುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಫ್ರೀಬೀಸ್ ನ್ನ ಭರಿಸಲು ಜನರ ಜೇಬಿಗೆ ಕತ್ತರಿಸಿದೆ. ಬೆಲೆ ಏರಿಕೆಯ ವಿರುದ್ಧ ಬೆಂಗಳೂರಿನಲ್ಲಿ ನಾಳೆ ಅಹೋರಾತ್ರಿ ಧರಣಿಯನ್ನ ನಡೆಸಲಾಗುವುದು. ನಂತರ ಏ.7 ರಿಂದ ರಾಜ್ಯಾದ್ಯಂತ ವಿಭಾಗೀಯ ಮಟ್ಟದಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದರು.
ಕಳ್ಳತನದಿಂದ 50 ಎಂ ಎಲ್ ಹಾಲನ್ನೂ ಕುಡಿಯುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ದರ ಏರಿಸುವ ಮೂಲಕ ಜನರ ರಕ್ತ ಹೀರುವ ಕೆಲಸಕ್ಕೆ ಕೈಹಾಕಿದೆ. ಬೇರೆ ರಾಜ್ಯಗಳಲ್ಲಿ ಹೋಲಿಸಿದರೆ ಹಾಲಿನ ದರ ಕರ್ನಾಟಕದಲ್ಲಿ ಕಡಿಮೆಯಿದೆ ಎನ್ನುವ ರಾಜ್ಯ ಸರ್ಕಾರ ಬೇರೆ ರಾಜ್ಯಗಳಲ್ಲಿ ಡಿಸೇಲ್, ಲಿಕ್ಕರ್ ಕಡಿಮೆಯಿದೆ ಇಲ್ಲಿಯಾಕೆ ಹೆಚ್ಚಿಸಿದೆ ಎಂದು ಪ್ರಶ್ನಿಸಿದರು.
ನಾಳೆ ಬೆಂಗಳೂರಿನಲ್ಲಿ 18 ಜನ ಶಾಸಕರ ಅಮಾನತುಗೊಂಡಿರುವುದನ್ನೂ ವಿರೋಧಿಸಿ ಪ್ರತಿಭಟಿಸಲಾಗುತ್ತಿದೆ. ಸರ್ಕಾರದ ಯಾವುದೆ ಸಭೆಗಳಿಗೆ ಭಾಗಿಯಾಗದಂತೆ ಬಿಜೆಪಿ ತೀರ್ಮಾನಿಸಿದೆ ಎಂ.ಎಲ್ ಸಿ ಅರುಣ್ ತಿಳಿಸಿದರು.
Congress is sucking people's blood with price hike