ಬೈಕ್ ಗಳ ನಡುವೆ ಡಿಕ್ಕಿ-ಓರ್ವ ಸಾವು-Collision between bikes-one dead

Suddilive || Rippenpete

ಬೈಕ್ ಗಳ ನಡುವೆ ಡಿಕ್ಕಿ-ಓರ್ವ ಸಾವು-Collision between bikes-one dead    


Bikes, accident


ಇಲ್ಲಿನ ಸಮೀಪದ ಶಾಂತಪುರ ಗ್ರಾಮದ ಬಳಿಯಲ್ಲಿ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿ ಮೂವರಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಭದ್ರಾವತಿ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ರಾಜು ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಬೊಮ್ಮನಕಟ್ಟೆ ಗ್ರಾಮದ ಶ್ರೀನಿವಾಸ್ , ಕೋಡೂರು ಸಮೀಪದ ಸಿದ್ದಗಿರಿ ಗ್ರಾಮದ ನಿವಾಸಿ ಚರಣ್ (25) ಹಾಗೂ ಸಿದ್ದಗಿರಿ ಗ್ರಾಮದ ನಿವಾಸಿ ಪ್ರೀತಮ್ (15) ಗಂಭೀರ ಗಾಯಗಳಾಗಿವೆ.

ಶ್ರೀನಿವಾಸ್ ಗೆ ಎದೆ ಹಾಗೂ ತಲೆಗೆ ತೀವ್ರವಾದ ಗಾಯಗಳಾಗಿದ್ದು ಪ್ರೀತಮ್ ಗೆ ಕಾಲು ಮುರಿತವಾಗಿ , ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟಾಗಿದೆ. ಬೈಕ್ ಸವಾರ ಚರಣ್ ಗೂ ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಶಾಂತಪುರ ಗ್ರಾಮದ ತಿರುವಿನಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಘಟನೆಯಲ್ಲಿ ಭದ್ರಾವತಿ ಮೂಲದ ಮರ ಕಟಾವ್ ಮಾಡಲು ಬಂದಿದ್ದ ಕಾರ್ಮಿಕರು ಆನೆಗದ್ದೆ ಬಳಿ ಕ್ಯಾಂಪ್ ಹಾಕಿದ್ದರು ಜೇನಿಯಲ್ಲಿ ಕೆಲಸವುದೆ ಎಂದು ತೆರಳಿ ಹಿಂದಿರುಗುವಾಗ ಈ ಘಟನೆ ನಡೆದಿದೆ. ಕೋಡೂರು ಗ್ರಾಮದ ಸಿದ್ದಗಿರಿ ಗ್ರಾಮದ ಅಪ್ರಾಪ್ತ ಯುವಕ ಸೇರಿದಂತೆ ಇಬ್ಬರು ಯುವಕರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗದ ಶವಾಗಾರದಲ್ಲಿ ರಾಜು‌ ಮೃತದೇಹವನ್ನು‌ ಇರಿಸಲಾಗಿದೆ.

Collision between bikes-one dead 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close