Suddilive || Sagara
ಸಾಗರದಲ್ಲೂ ಜನಿವಾರ ತೆಗೆಸಿದ ಪ್ರಕರಣ- ದೂರು ದಾಖಲು-Case of Janiwara being removed in Sagar too - complaint filed
ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ವಿಷಯವನ್ನ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಾಗರದ ವಿಸ್ಯಾರ್ಥಿಗೂ ಜನಿವಾರ ತೆಗೆಯಿಸಿ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಇದರಿಂದ ಸಾಗರದಲ್ಲೂ ವಿದ್ಯಾರ್ಥಿಯಿಂದ ಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್, ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ಪಾರ್ಥ ಎಂಬ 18 ವರ್ಷದ ವಿದ್ಯಾರ್ಥಿ ದೂರು ದಾಖಲಿಸಿದ್ದಾನೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ಪಾರ್ಥ ಎಂಬ ವಿದ್ಯಾರ್ಥಿಗೆ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಅಂಗಿ ಬಿಚ್ಚಿಸಿ ಜನಿವಾರವನ್ನು ತೆಗೆಯಿಸಿದ ಪ್ರಕರಣ ನಡೆದಿದೆ.
ಶನಿವಾರ ಎಸಿ ಕಚೇರಿ ಮುಂಭಾಗದಲ್ಲಿ ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಿಸಿದ ಘಟನೆಯನ್ನಖಂಡಿಸಿ ಬ್ರಾಹ್ಮಣ ಮಹಾಸಭಾ ತಾಲೂಕು ಘಟಕ ಮೆರವಣಿಗೆ ನಡೆಯಿಸಿ ಪ್ರತಿಭಟನೆ ನಡೆಸುವಾಗ ಸಾಗರದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಯಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಘಟನೆ ನಡೆದಿದೆ ಎಂದು ಪ್ರತಿಭಟನಾಕಾರೊಬ್ವರು ಪ್ರಸ್ತಾಪಿಸಿದ್ದಾರೆ.
ಯಾವ ವಿದ್ಯಾರ್ಥಿ ಎಂದಾಗ ಸಾಗರದ ಇಕ್ಕೇರಿಯ ಪಾರ್ಥ ಎಂಬ ವಿದ್ಯಾರ್ಥಿ ಹೆಸರು ಬೆಳಕಿಗೆ ಬಂದಿದೆ. ಸಾಗರ ಪೇಟೆ ಪೋಲಿಸ್ ಠಾಣೆ ಎದುರು ಸಾಗರ ತಾಲುಕು ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಅಪಮಾನ ಮಾಡಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಜನಿವಾರ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿ ಎಸ್ ಪಾರ್ಥ ಪರೀಕ್ಷಾ ಕೊಠಡಿಯ ಬಳಿಯಲ್ಲಿಯೇ ತನ್ನ ಜನಿವಾರವನ್ನು ಕತ್ತರಿಸಿದ ವಿವರವನ್ನು ನೀಡುತ್ತಿದ್ದಂತೆ, ಸಂಬಂಧಪಟ್ಟ ಅಧಿಕಾರಿಯ ಮೇಲೆ ಶಿಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿಯಲಾಯಿತು. ಡಿವೈಎಸ್ ಪಿ ಗೋಪಾಲಕೃಷ್ಣ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಸಂಜೆಯ ಒಳಗಾಗಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಯು ಹೆಚ್ ರಾಮಪ್ಪ.ಎಲ್ ಟಿ.ತಿಮ್ಮಪ್ಪ.ಬಿ.ಆರ್.ಜಯಂತ್ ಇನ್ನಿತರರು ಮಾತನಾಡಿದರು.
ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರವೀಶ್,ಮ.ಸ ನಂಜುಂಡಸ್ವಾಮಿ,ಎಲ್.ಟಿ.ತಿಮ್ಮಪ್ಪ, ಬಿ.ಆರ್.ಜಯಂತ್, ಯು.ಎಚ್.ರಾಮಪ್ಪ ಕಾರ್ಯದರ್ಶಿ ಸುದರ್ಶನ್, ಪ್ರಸನ್ನ ಕೆರೆಕ್ಕೆ,ವೆಂಕಟೇಶ್ ಕಟ್ಟಿ, ನಗರಸಭಾ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್, ವ.ಶಂ.ರಾಮಚಂದ್ರ ಭಟ್, ಚೂಡಮಣಿ ರಾಮಚಂದ್ರ ಕೆ.ಸಿ.ದೆವಪ್ಪ, ವಿನಾಯಕ್ ಜೋಯ್ಸ್.ರಾಮಚಂದ್ರ ಖಂಡಿಕಾ.ಸೂರ್ಯನಾರಾಯಣ.ವೈ.ಮೋಹನ್, ಐ.ವಿ.ಹೆಗಡೆ, ಶೇಷಗಿರಿ ಹೆಗಡೆ.ನಾರಾಯಣ ಮೂರ್ತಿ ಚಿನ್ಮಯ್ ಹಾಗೂ ಇತರರಿದ್ದರು.
ನಾಳೆ ಶಿವಮೊಗ್ಗದಲ್ಲಿ ಪ್ರತಿಭಟನೆ
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ನಾಳೆ ಏ.21 ರಂದು ಜಿಲ್ಲಾ ಸರ್ವ ವಿಪ್ರ ವೃಂದದಿಂದ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ತಿಲಕ್ ನಗರದ ರಾಯಮಠದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
Case of Janiwara being removed