ಅಧಿಕಾರಿಗಳ ವಿರುದ್ಧದ ಕ್ರಮಕ್ಕೆ ಠಾಣ ಮೆಟ್ಟಿಲೇರಿದ ಬ್ರಾಹ್ಮಣ ಸಮುದಾಯ-Brahmin community steps up

Suddilive || Shivamogga

ಅಧಿಕಾರಿಗಳ ವಿರುದ್ಧದ ಕ್ರಮಕ್ಕೆ ಠಾಣ ಮೆಟ್ಟಿಲೇರಿದ ಬ್ರಾಹ್ಮಣ ಸಮುದಾಯ-Brahmin community steps up to take action against officials

Brahmin, community

ಎರಡು ದಿನಗಳಿಂದ ನಗರದಲ್ಲಿ ಬುಗಿಲೆದ್ದಿರುವ ಜನಿವಾರ ಪ್ರಕರಣ ಸಧ್ಯಕ್ಕೆ ಬ್ರೇಕ್ ಬೀಳುವ ಹಾಗೆ ಕಾಣುತ್ತಿಲ್ಲ. ಪ್ರಕರಣದ ವಿರುದ್ಧವೂ ತೆಗೆದುಕೊಂಡಿರುವ ಕ್ರಮ ಸಹ ಗುಬ್ಬಿಮೇಲೆ ಬ್ರಹ್ಮಾಸ್ತ್ರದಂತೆ ಕಾಣುತ್ತಿದೆ. 

ಇತ್ತ ಬ್ರಾಹ್ಮಣ ಸಮಾಜವೂ ಸಹ ಜನಿವಾರವನ್ನ ಕತ್ತರಿಸಲು ಸೂಚಿಸಿದ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ದೊಡ್ಡಪೆಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದೆ. 

ಸಿಇಟಿ ಪರೀಕ್ಷಾ ಕೇಂದ್ರವಾದ ಆದಿಚುಂಚನಗಿರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಅಂಗಶೋಧನೆಗೆ ಅವಕಾಶವಿರುವ ಹಿನ್ನಲೆಯಲ್ಲಿ ದೈಹಿಕ ತಪಾಸಣೆಯ ನೆಪದಲ್ಲಿ ಜನಿವಾರ ಕತ್ತರಿಸಲು ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಮುಂದಾದರೂ ಅವರಿಗೆ ಸೂಚನೆ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. 

ಸಮುದಾಯದ ಭಾವನೆಗಳಿಗೆ ದಕ್ಕೆ ಉಂಟಮಾಡಬಾರದು ಎಂಬ ಕಾನೂನು ಇದ್ದರೂ ಜನಿವಾರವನ್ನ ಕತ್ತರಿಸಿ ಬ್ರಾಹ್ಮಣ ಸಮುದಾಯದ ಭಾವನೆಗೆ ದಕ್ಕೆ ಉಂಟು ಮಾಡಲಾಗಿದೆ. ಜನಿವಾರ ಕತ್ತರಿಸಲು ಸೂಚಿಸಿರುವ ಅಧಿಕಾರಿಗಳ ವಿರುದ್ಧ ಎಫ್ಐಆರ್ ಗೆ ಆಗ್ರಹಿಸಲಾಗಿದೆ. 

ಮನವಿ ನೀಡುವ ವೇಳೆ ಜಿಲ್ಲಾ ಬ್ರಾಹ್ಮಣ ಸಮುದಾಯದ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್, ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್, ಹೊಯ್ಸಳ ಸೊಸೈಟಿಯ ಎಂ ಶಂಕರ್, ಮಹಾಸಭಾದ ಜಿಲ್ಲಾ ಪ್ರತಿನಿಧಿ ರಘುರಾಮ್, ಬಿಜೆಪಿ ಮುಖಂಡ ದತ್ತಾತ್ರಿ, ಮಹಾಸಭದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು. 

Brahmin community steps up

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close