ಮರಣ ಪ್ರಕರಣ ತನಿಖೆಗೆ ಸೂಚನೆ-Boy dies from KFD

Suddilive || Shivamogga

ಕೆಎಫ್ ಡಿಯಿಂದ ಬಾಲಕ ಸಾವು: ಮರಣ ಪ್ರಕರಣ ತನಿಖೆ ನಡೆಸಿ ವರದಿ ನೀಡಲು ಡಿಸಿ‌ ಸೂಚನೆ -Boy dies from KFD: DC instructed to investigate the death case and submit a report

KFD, Boy

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದತ್ತರಾಜಾಪುರ ಗ್ರಾಮದ 8 ವರ್ಷದ ಬಾಲಕ ರಚಿತ್   ಕೆ ಎಫ್ ಡಿ ಕಾಯಿಲೆಯಿಂದ ನಿನ್ನೆ ದಿ.17-04-2025 ರಂದು  ಕೆಎಂಸಿ  ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಏಪ್ರಿಲ್ 4ನೇ ತಾರೀಕು ರಚಿತ್ ರವರ ಅಕ್ಕ ರಮ್ಯಾ ಇವರಿಗೆ  ಜ್ವರ ಇದ್ದ ಪ್ರಯುಕ್ತ ಜೆಸಿ ಆಸ್ಪತ್ರೆ ತೀರ್ಥಹಳ್ಳಿ ಯಲ್ಲಿ ದಾಖಲಾಗಿ ಕೆಎಫ್ ಡಿ ಪರೀಕ್ಷೆ ಮಾಡಿಸಿದಾಗ ಕೆಎಫ್ ಡಿ ಪಾಸಿಟಿವ್ ಬಂದಿರುತ್ತದೆ. ಹಾಗೂ  ರಚಿತ್ ಗೆ ಏಪ್ರಿಲ್ 5ನೇ ತಾರೀಕು ಸುಸ್ತು ಮತ್ತು ವಾಂತಿ ಇದ್ದ ಪ್ರಯುಕ್ತ ಜೆಸಿ ಆಸ್ಪತ್ರೆಗೆ ದಾಖಲಾಗಿ ಕೆಎಫ್ ಡಿ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದ್ದು ರಮ್ಯಾ ಮತ್ತು ರಚಿತ್ ಇಬ್ಬರಿಗೂ 6ನೇ ತಾರೀಕು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿ ಎಬಿಎಆರ್ ಕೆ ಅಡಿ ಉಚಿತ ಚಿಕಿತ್ಸೆ ನೀಡಲಾಗಿದ್ದು ರಮ್ಯಾ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುತ್ತಾರೆ.

ರಚಿತ್ ಆರೋಗ್ಯ ಚೇತರಿಸದೇ ಇದ್ದುದರಿಂದ ಆಸ್ಪತ್ರೆಯಲ್ಲಿಯೇ ಇರಿಸಿ ತೀವ್ರ ನಿಘಾ ಘಟಕ ದಲ್ಲಿರಿಸಿ ಚಿಕಿತ್ಸೆ ನೀಡಲಾಗಿದ್ದು  ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ರಚಿತ್ ಮರಣ ಹೊಂದಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿರುತ್ತಾರೆ .

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ ನವರು  ಈ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿ ಯಲ್ಲಿ ಸಭೆ ನಡೆಸಿ ಕೆಎಫ್ ಡಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುತ್ತಾರೆ. ಹಾಗೂ ರಚಿತ್ ಚಿಕಿತ್ಸೆ ಕುರಿತು ಮಣಿಪಾಲ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು.

 ತೀರ್ಥಹಳ್ಳಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ರವರು ತೀರ್ಥಹಳ್ಳಿ ಯಲ್ಲಿ  ಅಧಿಕಾರಿಗಳ ಸಭೆ ಕರೆದು ಕೆಎಫ್ ಡಿ ನಿಯಂತ್ರಣದ ಕುರಿತು ಸಲಹೆ ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಸೂಚನೆ ನೀಡಿರುತ್ತಾರೆ ಹಾಗೂ  ರಚಿತ್ ಚಿಕಿತ್ಸೆ ಕುರಿತು ಮಣಿಪಾಲ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಉತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದರು. ಇದರ ಹೊರತಾಗಿಯೂ ರಚಿತ್ ಸಾವು ಎಲ್ಲರಿಗೂ ತುಂಬಾ ನೋವನ್ನುಂಟು ಮಾಡಿದೆ .

ಈ ಮರಣ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾನ್ಯ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿರುತ್ತಾರೆ.

Boy dies from KFD

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close