ಬೈಕ್ ಸ್ಕಿಡ್ ಆಗಿ ಸವಾರ ಸಾವು-Bike rider dies after skidding

Suddilive || Shivamogga

ಬೈಕ್ ಸ್ಕಿಡ್ ಆಗಿ ಸವಾರ ಸಾವು-Bike rider dies after skidding

Bike, skid


ಬೈಕ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಇಂದು ಸಂಜೆ ನಗರದ ಶಂಕರ ಮಠ ವೃತ್ತದ ಬಳಿ ಈ ದುರ್ಘಟನೆ ನಡೆದಿದೆ.

ಅಭಿಷೇಕ್ (23) ಮೃತ ದುರ್ದೈವಿ, ನವುಲೆ ಬಳಿ ಮಾರುತಿ ಬಡಾವಣೆಯ ಮೊದಲ ತಿರುವಿನ ವಾಸಿ ಅಭಿಷೇಕ್ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಮನೆಗೆ ವಾಪಾಸ್ ಆಗುವ ವೇಳೆ ಘಟನೆ ನಡೆದಿದೆ.

ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಅಭಿಷೇಕ್ ಶಂಕರ ಮಠ ವೃತ್ತದಲ್ಲಿ ಚಲಿಸುತ್ತಿದ್ದಾಗ ಸ್ಕಿಡ್ ಆದ ಪರಿಣಾಮ ಕೆಳಗೆ ಬಿದ್ದಿದ್ದಾರೆ.  ತಲೆಗೆ ಡಿವೈಡರ್ ಹೊಡೆದ ಪರಿಣಾಮ ತೀವ್ರಗಾಯಗಳಾಗಿವೆ.

ಅಲ್ಲೇ ಇದ್ದ ಸ್ಥಳೀಯರು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಾಕಾರಿಯಾಗದೆ ಅಭಿಷೇಕ್ ವಿಧಿವಶರಾಗಿದ್ದಾರೆ.

Bike rider dies after skidding

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close