ಬಿಆರ್ ಪಿ, ಮಗ ಶವವಾಗಿ ಪತ್ತೆ ತಂದೆ ನೀರುಪಾಲು -BRP, son found dead, father drowned

 Suddilive || Bhardravathi

ಬಿಆರ್ ಪಿ, ಮಗ ಶವವಾಗಿ ಪತ್ತೆ ತಂದೆ ನೀರುಪಾಲು -BRP, son found dead, father drowned

BRP, drowned


ಭದ್ರಾ ನದಿಗೆ ಇಳಿದಿದ್ದ ಮಗನನ್ನ ರಕ್ಚಿಸಲು ಹೋದ ತಂದೆಯೂ ಸಹ ನೀರುಪಾಲಾಗಿದ್ದಾರೆ.  ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿಲ್ಲ. ಘಟನೆ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಭದ್ರಾವತಿಯ ಭೂತನಗುಡಿಯ ನಿವಾಸಿ ಹಫೀಜ್ ಜಾಬರ್ ಮತ್ತು ಅವರ 14 ವರ್ಷದ ಪುತ್ರ ಜಾವದ್ ಮತ್ತು ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು. ಊಟ ಮುಗಿಸಿ  ಪುತ್ರ ಜಾವಾದ್ ಹಿನ್ನೀರಿನಲ್ಲಿ ಇಳಿದಿದ್ದಾನೆ. ನೀರಿನ‌ಅಳತೆಯನ್ನ‌ಅಂದಾಜಿಸದ ಜಾವದ್ ನೀರು ಪಾಲಾಗಿದ್ದಾನೆ. 

ಆತನನ್ನ ರಕ್ಷಿಸಲು ತಂದೆ ಜಾಬರ್ ನೀರಿಗೆ ಇಳಿದು ನೀರುಪಾಲಾಗಿದ್ದಾರೆ.  ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾದ ಜಾವದ್ ಶವವಾಗಿ ಪತ್ತೆಯಾದರೆ ತಂದೆ ಜಾಬರ್ ನ ಹುಡುಕಾಟ ನಡೆದಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. 

ಹಫೀಜ್ ಜಾಬರ್ ಭದ್ರಾವತಿಯ ಪ್ರಸಿದ್ಧ ವ್ಯಾಪಾರಿಯಾಗಿದ್ದಾರೆ. ಸಧ್ಯಕ್ಕೆ ಶೋಧಕಾರ್ಯ ಸ್ಥಗಿತಗೊಂಡಿದೆ. ಬೆಳಿಗ್ಗೆ ನಡೆಯಲಿದೆ. 

BRP, son found dead, father drowned


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close