Suddilive || Shivamogga
ಬಿಜೆಪಿ ಸಂಘಟನ ಸಭೆ-BJP organizational meeting
ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶಿವಮೊಗ್ಗ ಗ್ರಾಮಾಂತರ ಮತ್ತು ಹೊಳೆಹೊನ್ನೂರು ಮಂಡಲದ ಸಂಘಟನೆ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಂಸದರಾದ ಬಿ ವೈ ರಾಘವೇಂದ್ರ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರ ಬಲಿಗೆ ಹತ್ಯೆಯಾದ ಮಂಜುನಾಥ ಅವರ ಪಾರ್ಥೀವ ಶರೀರದ ಶೋಬಾಯಾತ್ರೆಯ ವೇಳೆ ಮಹಿಳಾ ಘಟಕ ಮತ್ತು ಇತರೆ ಮಂಡಲಗಳು ಸಣ್ಣಪುಟ್ಟ ಸಮಸ್ಯೆಗಳನ್ನ ಸರಿಪಡಿಸಿಕೊಂಡು ಉತ್ತಮ ನಿರ್ವಹಣೆ ಮಾಡಿರುವ ಬಗ್ಗೆ ಶ್ಲಾಘಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್ ಕೆ ಜಗದೀಶ್ ಮಾಜಿ ಶಾಸಕರಾದ ಕೆ ಬಿ ಅಶೋಕ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷರಾದ ಎಸ್ ರಮೇಶ್, ಮಂಡಲದ ಅಧ್ಯಕ್ಷರುಗಳಾದ ಸುರೇಶ್, ಮಲ್ಲೇಶಪ್ಪ ಪ್ರಮುಖರಾದ ಜಿ ಈ. ವೀರುಪಾಕ್ಷಪ್ಪ,ಮಂಜುನಾಥ್ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
BJP organizational meeting