Suddilive || Soraba
ಸಚಿವ ಮಧು ಬಂಗಾರಪ್ಪನವರ ಕ್ಷೇತ್ರದಲ್ಲಿ ಕಿಲ ಕಿಲ ನಗೆ ಬೀರಿದ ಬಿಜೆಪಿ-BJP makes a splash in Minister Madhu Bangarappa's constituency
ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ಬಿಜೆಪಿ ಅರಳಿದೆ. ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲಿಯೇ ಬಿಜೆಪಿ ಪುರಸಭೆ ಅಧ್ಯಕ್ಷ ಸ್ಥಾನ ಗಳಿಸುವ ಮೂಲಕ ಬಿಜೆಪಿ ಕಿಲ ಕಿಲ ಎಂದು ನಗೆ ಬೀರಿದೆ.
ಸೊರಬ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. 12 ಜನ ಪುರಸಭೆ ಸದಸ್ಯರು ಮತ್ತು ಸಚಿವ, ಎಂಎಲ್ ಸಿ ಮತ್ತು ಸಂಸದರನ್ನೊಳಗೊಂಡು ಒಟ್ಟು 15 ಜನರಿಗೆ ಮತದಾನ ಹಾಕಲು ಹಕ್ಕನ್ನ ಹೊಂದಿದ್ದಾರೆ.
ಇದರಲ್ಲಿ ಅಧ್ಯಕ್ಷ ಸ್ಥಾನವನ್ನ ಎಸ್ ಸಿ ಮೀಸಲು ಕ್ಷೇತ್ರ ಎಂದು ಘೋಷಿಸಿದ ಕಾರಣ ಎಸ್ ಎಸ್ ಅಭ್ಯರ್ಥಿಯಾಗಿ ಕ್ಷದಲ್ಲಿದ್ದ ಬಿಜೆಪಿಯ ಪ್ರಭು ಮೇಸ್ತ್ರಿ ಅವಿರೋಧವಾಗಿ ಗೆದ್ದು ಬಂದರೆ ಕಾಂಗ್ರೆಸ್ ನ ಮಹಿಳಾ ಅಭ್ಯರ್ಥಿ ರಜನಿ 8 ಮತಗಳನ್ನ ಪಡೆದು ಗೆದ್ದು ಬಂದಿದ್ದಾರೆ.
ಇದರಿಂದ ಸಚಿವರ ಮಧು ಬಙಗಾರಪ್ಪನವರ ಸೊರಬ ಕ್ಷೇತ್ರದಲ್ಲಿ ಕಮಲ ಅರಳಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
BJP makes a splash