ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ-BJP celebrated by distributing sweets

 suddilive || Shivamogga

ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ-BJP celebrated by distributing sweets

Bjp, celebrated


ವಕ್ಫ್ ಬಿಲ್ ನಲ್ಲಿ ಪರಿಶಿಷ್ಟ ಪಂಗಡಗಳ ಸದಸ್ಯರ ಭೂಮಿಯನ್ನ ವಕ್ಫ್ ಆಸ್ತಿಯಾಗುವುದಿಲ್ಲ ಎಂದು ಘೋಷಿಸಿರುವುದು ಮತ್ತು ಐತಿಹಾಸಿಕ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿದ್ದಕ್ಕೆ ಜಿಲ್ಲಾ ಬಿಜೆಪಿ ಎಸ್. ಟಿ ಮೋರ್ಚಾ ಕಚೇರಿಯ ಮುಂದೆ ಸಂಭ್ರಮಿಸಿದೆ. 

ಐದನೇ ಶೆಡ್ಯೂಲ್ ಮತ್ತು ಆರನೇ ಶೆಡ್ಯೂಲ್ ನಿಬಂಧನೆಗಳ ಅಡಿಯಲ್ಲಿ ಪರಿಶಿಷ್ಟ ಪಂಗಡಗಳ ಸದಸ್ಯರಿಗೆ ಸೇರಿದ ಯಾವುದೇ ಭೂಮಿಯನ್ನ ವಕ್ಫ್ ಆಸ್ತಿ ಎಂದು ಘೋಷಿಸಲಾಗುವುದಿಲ್ಲ ಎಂದು ನಮೂದಿಸಿದನ್ನ  ಬಿಜೆಪಿ ಸಂಭ್ರಮಿಸಿ ಸ್ವಾಗತಿಸಿದೆ. 

ಈ ಕುರಿತು ಮಾತನಾಡಿದ ಎಂಎಲ್ ಸಿ ಡಾ.ಧನಂಜಯ ಸರ್ಜಿ, ನೆಹರೂ ಅವರು  ವಕ್ಫ್ ಕಾನೂನು ಜಾರಿಗೊಳಿಸಿದರು. ನಂತರ ತುಷ್ಟೀಕರಣಕ್ಕಾಗಿ ತಿದ್ದುಪಡಿ ಮಾಡಲಾಗಿ ಜಾರಿಗೊಳಿಸಲಾಗಿತ್ತು. ಈಗ ಬಿಜೆಪಿಯ ಮೋದಿ ಸರ್ಕಾರ ತಿದ್ದುಪಡಿ ತಂದು ಒಳ್ಳೆಯ ಕೆಲಸವನ್ನ‌ಮಾಡಿದ್ದಾರೆ ಎಂದರು. 

ದೇಶದಲ್ಲಿ ರೈಲ್ವೆ ಇಲಾಖೆಗೆ ಅತಿಹೆಚ್ಚು ಆಸ್ತಿಯಿದ್ದರೆ, ಅದರ ನಂತರ ವಕ್ಫ್ ಗೆ ಅತಿಹೆಚ್ಚು ಆಸ್ತಿಯಿದೆ. ಮೋದಿಯವರಿಗೆ ಅಭಿನಂದಿಸಲಾಗುವುದು ಎಂದರು. ನಂತರ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಎನ್ ಕೆ ಜಗದೀಶ್, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ರಾದ ಹರೀಶ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ  ಎಚ್.ಸಿ ಮಾಲತೇಶ್,ಎಂ.ಬಿ ಹರಿಕೃಷ್ಣ ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್.ಸಿ, ಎಸ್.ಟಿ ಮೋರ್ಚಾದ ಪದಾಧಿಕಾರಿಗಳು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮದಲ್ಲಿ ಭಾಗಿಯಾಗಿದ್ದರು.

BJP celebrated by distributing sweets

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close