ಎ ಸ್ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಲ್ಲಿ ತಿಳಿಗೊಂಡ ಉದ್ವಿಗ್ನ ಪರಿಸ್ಥಿತಿ- A tense case resolved

 Suddilive || Shivamogga

ಎ ಸ್ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಲ್ಲಿ ತಿಳಿಗೊಂಡ ಉದ್ವಿಗ್ನ ಪರಿಸ್ಥಿತಿ-A tense case resolved through the mediation of S.P. Mithun Kumar

Tense, resolved



ಶಿವಮೊಗ್ಗದ ಡಿಸಿ ಕಚೇರಿಯ ಎದುರಿನ ಈದ್ಗಾ ಮೈದಾನದಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಓಡಾಡದಂತೆ ಬೇಲಿ ಹಾಕಿರುವುದು ಹಿಂದೂ ಸಂಘಟನೆ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. 

ಈ ಈದ್ಗಾ ಮೈದಾನಕ್ಕೆ ಬೇಲಿ ಹಾಕಿರುವುದು ಹಿಂದೂ ಸಂಘಟನೆಯ ಆಕ್ರೋಶಕ್ಕೆ ಗುರಿಯಾಗಿದೆ. ಇದು ಸಾರ್ವಜನಿಕರ ಆಸ್ತಿವಿನಃ ಬೇರೆಯಾರದ್ದೂ ಆಸ್ತಿಯಲ್ಲ. ಈ ಬೇಲಿಯನ್ನ ಪೊಲೀಸರೆ ತೆಗೆಸಬೇಕು. ಇಲ್ಲವಾದಲ್ಲಿ ನಾವೇ ಬೇಲಿ ತೆಗೆಯುವುದಾಗಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. 


ಜಯನಗರ ಪೊಲೀಸರು ಸಮಯಾವಕಾಶ ಕೊಡಿ ಬೇಲಿ ತೆಗೆಸುವುದಾಗಿ ತಿಳಿಸಿದರು. ಇಷ್ಟಕ್ಕೂ ಸುಮ್ಮನಾಗದ ಹಿಂದೂ ಸಂಘಟನೆಗಳು  ಮತ್ತು ಸಾರ್ವಜನಿಕರು ಈ ಬೇಲಿ ಹಾಕುವವರೆಗೆ ಪೊಲೀಸರು ಸುಮ್ಮನೆ ಕುಳಿತಿದ್ದೀರ ಎಂದು ಆರೋಪಿಸಿದರು. 

ದಿಡೀರ್ ಎಂದು ಬೇಲಿಯ ಹಿಂಭಾಗದಲ್ಲಿ ಕುಳಿತ ಹಿಂದೂ ಸಂಘಟನೆಗಳು ಅಕ್ರಮ ಬೇಲಿ ತೆಗೆಸುವಂತೆ ಘೋಷಣೆ ಕೂಗಿದರು. ಮುಸ್ಲೀಂ ಗೂಂಡಗಳು ಸಾರ್ವಜನಿಕ ಆಸ್ತಿಯನ್ನ ಕಬಳಿಸುತ್ತಿದ್ದಾರೆ. ಮುಸ್ಲೀಂರಿಗೆ ಸಹಕರಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಲಾಯಿತು.

10-15 ನಿಮಿಷಗಳಲ್ಲಿ ಬೇಲಿ ತೆಗೆಯಿಸದೆ ಇದ್ದರೆ ನಾವೇ ತೆಗೆಯಿಸುವುದಾಗಿ ಹಿಂದೂ ಸಂಘಟನೆ ಹಠ ಹಿಡಿದಿದೆ. ಸ್ಥಳಕ್ಕೆ ಬಂದ ಎಸ್ಪಿ ಮಿಥುನ್ ಕುಮಾರ್ ಪ್ರತಿಭಟನ ಮನನ ಎ ನಡೆಸುತ್ತಿದ್ದ ಹಿಂದೂ ಸಂಘಟನೆಯವರ ಜೊತೆ ಮಾತುಕತೆ ನಡೆಸಿದರು.  ಸಂಜೆ 6-7 ಗಂಟೆಯ ವರೆಗೆ ಸಮಯ ಕೊಡಿ 7-15 ರ ವರೆಗೆ ತೆಗೆಸದಿದ್ದರೆ ನಾನೇ ತೆಗೆಸುವುದಾಗಿ ಭರವಸೆ ನೀಡಿದರು. 

ಎಸ್ಪಿ ಅವರ ಭರವಸೆ ಹಿನ್ನಲೆಯಲ್ಲಿ  ಹಿಂದೂ ಸಂಘಟನೆ ಪ್ರತಿಭಟನೆ ಹಿಂಪಡೆದಿದೆ. 

A tense case resolved

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close