Suddilive || Shivamogga
ಮಂಜುನಾಥರ ಮನೆಯಿಂದ ಹೊರಟ ಶೋಭಾಯಾತ್ರೆ! A procession sets off from Manjunatha's House
ಉಗ್ರರ ಗುಡೇಂಟಿಗೆ ಬಲಿಯಾದ ಮಂಜುನಾಥ ಅವರ ಪಾರ್ಥೀವ ಶರೀರದ ಸಾರ್ವಜನಿಕ ಅಂತಿಮ ದರ್ಶನ ಮುಗಿಸಿ ಶೋಭಯಾತ್ರೆಯ ಲಾರಿಗೆ ತಂದು ಇರಿಸಲಾಗಿದೆ.
ಮಂಜುನಾಥ್ ಮಂಗಳವಾರ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಅವರ ಪಾರ್ಥೀವ ಶರೀರ ಇಂದು ಶಿವಮೊಗ್ಗಕ್ಕೆ ಬಂದಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಸದ ರಾಘವೇಂದ್ರ ಎಂಎಲ್ ಸಿ ಧನಂಜಯ ಸರ್ಜಿ, ಬಲ್ಕಿಸ್ ಭಾನು, ಮಾಜಿ ಸಚಿವ ರೇಣುಕಾಚಾರ್ಯ ಮೊದಲಾದ ನಾಯಕರು ಅಂತಿಮ ದರ್ಶನ ಪಡೆದರು 12.40 ಕ್ಕೆ ಶೋಭಾಯಾತ್ರೆಯ ಲಾರಿಗೆ ತಂದಿರಿಸಿ ಆಯನೂರು ಗೇಟ್ ನ್ನ 1-05 ಕ್ಕೆ ಬಿಟ್ಟಿದೆ. ನೇತಾಜಿ ಸರ್ಕಲ್ ಬಳಿ ಸರ್ಕಾರಿ ಗೌರವ ನೀಡಲಾಗಿತ್ತು.
ಹಿಂದೂ ಸಂಘಟನೆಗಳು ಕೇಸರಿ ಧ್ವಜ ಹಿಡಿದು ಬೈಕ್ ರ‌್ಯಾಲಿ ನಡೆಸಿದರೆ. ಸಂಸದ ರಾಘವೇಂದ್ರ ಶವದೊಂದಿಗೆ ವಾಹನದಲ್ಲಿ ಸಾಗಿದ್ದಾರೆ. ಹಿಂದಗಡೆ ಮಗ ಅಭಿಜೈ ಅಸ್ಥಿ ಹಿಡಿದು ಲಾರಿಯಲ್ಲಿ ಸಾಗಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ರಾಜ್ಯ ಸರ್ಕಾರದ ಪರಿಹಾರದ ಮೊತ್ತ ಕಡಿಮೆಯಾಗಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಇದು ಸರ್ಕಾರದಿಂದ ಕೊಡುವ ಹಣವಾಗಿದೆ ಮತ್ತೆ ಸ್ನೇಹಿತರೆಲ್ಲಾ ಸೇರಿ ಮತ್ತೊಂದಿಷ್ಟು ಹಣ ಸಂಗ್ರಹಿಸಿ ನೀಡಲಾಗುವುದು ಎಂದು ತಿಳಿಸಿದರು.
A procession sets off