Suddilive || Shivamogga
8 ಟ್ರ್ಯಾಕ್ಟರ್, ನಾಲ್ಕು ಜೆಸಿಬಿಗೆ ದಂಡ-8 tractors, 4 JCBs fined
ಅಕ್ರಮ ಮರಳು ಸಂಗ್ರಹ ಮತ್ತು ಸಾಗಾಣಿಕೆ ಮಾಡಲೆತ್ನಿಸುತ್ತಿದ್ದ 8 ಟ್ರ್ಯಾಕ್ಟರ್ ಮತ್ತು 4 ಜೆಸಿಬಿ ಮೇಲೆ ಲಕ್ಷಾಂತರ ರೂ. ದಂಡ ಹಾಕಲಾಗಿದೆ. ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ದಾಳಿ ನಡೆದಿದೆ.
ಹಾಡೋನಹಳ್ಳಿ, ಮಂಗೋಟೆಯಲ್ಲಿ ಅವ್ಯವಹಿತವಾಗಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಯುತ್ತಿದ್ದರು ಸಹ ಪದೇ ಪದೇ ದಾಳಿ ನಡೆದರೂ ಸಹ ಮರಳುಗಾರಿಕೆಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿರಲಿಲ್ಲ. ವಾಹನಗಳು ಸೀಜ್ ಆಗದ ಹಿನ್ನಲೆಯಲ್ಲಿ ಪದೇ ಪದೇ ಮರಳು ದಾಳಿ ನಡೆದರೂ ಮರುದಿನ ಆರಂಭವಾಗುತ್ತಿತ್ತು.
ಇಂದು ಎಸಿ ಸತ್ಯನಾರಾಯಣ, ತಹಶೀಲ್ದಾರ್ ರಾಜೀವ್ ಇಬ್ಬರು ಆರ್ ಐ, ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 8 ಜನ ಅಧಿಕಾರಿಗಳ ತಂಡ ಬೆಳ್ಳಂಬೆಳಿಗ್ಗೆ 4-30 ಹಾಡೋನಹಳ್ಳಿ ತುಂಗ ನದಿಯಲ್ಲಿ ಅಡ್ಡಾಡುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 8 ಟ್ಯ್ಯಾಕ್ಟರ್ ಮತ್ತು 4 ಜೆಸಿಬಿಯನ್ನ ವಶಕ್ಕೆ ಪಡೆದಿದ್ದಾರೆ.
ಅಚ್ಚರಿ ಎಂದರೆ ವಾಹನಗಳ ಮಾಲೀಕರ ಹೆಸರುಗಳೇ ಏರು ಪೇರು ಮಾಡಿಕೊಂಡಿರುವುದು ತಿಳಿದಿದೆ. ಇದರಲ್ಲಿ ಆರ್ ಟಿ ಒ ಅಧಿಕಾರಿಗಳು ದಾಳಿ ನಡೆಸಲು ಅವಕಾಶವಿದ್ದರೂ ದಾಳಿಯಲ್ಲಿ ಪಾಲ್ಗೊಳ್ಳದಿರುವುದು ಅಚ್ಚರಿ ಮುಡಿಸಿದೆ. ಒಟ್ಟು 3 ಲಕ್ಷದ 60 ಸಾವಿರ ರೂ. ದಂಡ ವಿಧಿಸಲಾಗಿದೆ.
8 tractors, 4 JCBs fined