ಭೂ ಒತ್ತುವರಿಗೆ ತೆರಳಿದ ಅರಣ್ಯ ಇಲಾಖೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ- Woman attempts suicide by consuming poison

Suddilive || Shivamogga

Woman attempts suicide by consuming poison in front of Forest Department, which went to confront land encroachers

Suicide, attempts

ಭೂ ಒತ್ತುವರಿ ತೆರವು ವೇಳೆ ವಿಷದ ಸೇವನೆಗೆ ಮಹಿಳೆಯೊಬ್ಬರು ಮುಂದಾದ ಘಟನೆ ಮೇಲಿನ ಕುಂಚೇನಹಳ್ಳಿ ತಾಂಡಾದಲ್ಲಿ ನಡೆದಿದೆ. 

ಶಿವಮೊಗ್ಗ ತಾಲೂಕಿನ ಮೇಲಿನ ಕುಂಚೆಹಳ್ಳಿ ಗ್ರಾಮದ, ಸರ್ವೇ ನಂಬರ್ 80ರಲ್ಲಿದ್ದ 4 ಎಕರೆ ಅಡಕೆ ತೋಟವಿದ್ದು ಅದನ್ನ ರಾಜಪ್ಪ ಮತ್ತು ಅವರ ಸಹೋದರ ಉಳುಮೆ ಮಾಡುತ್ತಿದ್ದರು. 

4 ಎಕರೆಯಲ್ಲಿ ಅಡಕೆ ಸಸಿ ಬೆಳೆಯಲಾಗಿದ್ದು, ಇದರ ತೆರವಿಗೆ ಯಂತ್ರಗಳೊಂದಿಗೆ ಸ್ಥಳಕ್ಕೆ ತೆರಳಿದ್ದ ಅರಣ್ಯ ಇಲಾಖೆ ಇಂದು ಮುಂದಾಗಿದ್ದರು. ಸರ್ವೆ ನಂಬರ್ 80 ರಲ್ಲಿ 1360 ಎಕರೆ ಇದ್ದು ಇದರಲ್ಲಿ 260 ಎಕರೆ ಉಳುಮೆ ಮಾಡಲಾಗುತ್ತಿದೆ. ಈ 260 ಎಕರೆಯಲ್ಲಿ 4 ಎಕರೆ ಭೂಮಿ ಒತ್ತುವರಿ ತೆರವು ಮಾಡಲಾಗುತ್ತಿರುವುದು ಅಚ್ಚರಿಮೂಡಿಸಿದೆ. 


ಭೂ ಒತ್ತುವರಿ ತೆರವಿಗೆ ಮುಂದಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಭೂ ಒತ್ತುವರಿ ಮಾಡಿ ಅಡಕೆ ತೋಟ ನಿರ್ಮಿಸಿದ್ದ 1000 ಸಸಿ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ಪೊಲೀಸ್ ಇಲಾಖೆಯ ಸಹಕಾರದಲ್ಲಿ ಒತ್ತುವರಿ ತೆರವಿಗೆ  ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. 

ಈ ವೇಳೆ ಒತ್ತುವರಿ ತೆರವು ವಿರೋಧಿಸಿ ವಿಷದ ಬಾಟಲಿಯಲ್ಲಿದ್ದ ದ್ರವವನ್ನ ರಾಜಪ್ಪ ಕುಟುಂಬದ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳೆಯರನ್ನು ಪೊಲೀಸ್ ಇಲಾಖೆ ಸಿಬ್ಬಂದಿಯವರು ತಡೆದಿದ್ದಾರೆ. ಅಡಕೆ ಮರಗಳ ಕಟಾವನ್ನು  ಅರಣ್ಯ ಇಲಾಖೆ ನಡೆಸಿದೆ. 

Woman attempts suicide by consuming poison

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close