Suddilive || Shivamogga
ಡಿಕೆಶಿ ಸವಾಲು ಸ್ವೀಕರಿಸಿದರೂ ಬಿಜೆಪಿಯ ರಾಜಕಾರಣದ ಉದ್ದೇಶವೇನು? ಕಿಮ್ಮನೆ ರತ್ನಾಕರ್-Even if DKSHI accepts the challenge, what is the purpose of BJP's politics? Kimmane Ratnakar
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಲ್ಪಸಂಖ್ಯಾತರಿಗೆ 4% ಮೀಸಲು ವಿಚಾರದಲ್ಲಿ ಬಿಜೆಪಿ ಡಿಸಿಎಂ ಅವರು ಸಂವಿಧಾನ ಬದಲಿಸುವ ಉದ್ದೇಶದಿಂದ ಅಪಪ್ರಚಾರದ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಡ್ಡಾರವರು ಸಂಸತ್ ನಲ್ಲಿ ಡಿಸಿಎಂ ಶಿವಕುಮಾರ್ ರಾಜೀನಾಮೆ ನೀಡಲು ಹೇಳಿದ್ದಾರೆ. ಸಂವಿದಾನದ ಮೂಲವನ್ನ ತಿದ್ದುಪಡಿ ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂ ನ ಜಡ್ಜ್ ಮೆಂಟ್ ಇದೆ. ಉಳಿದವುಗಳನ್ನ ತಿದ್ದುಪಡಿ ಮಾಡಬಹುದಾಗಿದೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಅದರಂತೆ ತಿದ್ದುಪಡಿ ನಡೆದಿದೆ ಎಂದು ವಿವರಿಸಿದರು.
ಬಿಜೆಪಿಯ ಮಾಜಿ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಿಸಲು ಬಂದಿದ್ದೇವೆ ಎಂದಿದ್ದರು. ಮೊನ್ನೆ ತೀರ್ಥಹಳ್ಳಿಯಲ್ಲಿ ಮಾಜಿ ಗೃಹಸಚಿವರು ಡಿಕೆಶಿಯ ಪ್ರತಿಕೃತಿ ಸುಟ್ಟಿದ್ದಾರೆ. 1966 ರಲ್ಲೇ ಆರ್ ಎಸ್ ಎಸ್ ತನ್ನ ಸಂವಿಧಾನದಲ್ಲಿ ಸಂವಿಧಾನವನ್ನ ಬದಲಿಸುವ ವಿಷಯವನ್ನ ಎಂ ಎಸ್ ಗೋಲ್ವಾಲ್ಕರ್ ಚಿಂತನಾಗಂಗಾದಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಿಸಿತ್ತು.
ಹಾಗಾದರೆ ಮಾಜಿ ಸಚಿವ ಜ್ಞಾನೇಂದ್ರ ಯಾರನ್ನ ಸುಡುತ್ತಾರೆ? ಡಿಕೆಶಿ ಹಾಗೆ ಮಾಡಿದರೆ ರಾಜೀನಾಮೆ ಕೊಡುವುದಾಗಿ ಸ್ಪಷ್ಟಪಡಿಸಿದರೂ ಬಿಜೆಪಿ ರಾಜಕಾರಣ ಮಾಡುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.
ಹಿಂದೂ ಸಂಸ್ಕೃತಿ ಉಳಿಯಬೇಕು. ಅಂಬೇಡ್ಕರ್ ಅವರನ್ನ ಕಾಂಗ್ರೆಸ್ ಸೋಲಿಸಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಆರ್ ಎಸ್ ಎಸ್, ಬಿಜೆಪಿ ಮತ್ತು ಇತರೆ ಹಿಂದೂ ಸಂಘಟನೆಗಳು 1925 ರಿಂದ 2025 ರವರೆಗೆ ಸಮಾಜದ ಶ್ರೇಣಿಕೃತ ವನ್ನ ಹೋಗಲಾಡಿಸಲು ಯಾವ ಹೋರಾಟ ಮಾಡಿವೆ ವಿವರಿಸಬೇಕು ಎಂದು ಪ್ರಶ್ನಿಸಿದರು.
ಡಿಕೆಶಿ ಹೇಳಿಕೆ ಕುರಿತು ಕಾಂಗ್ರೆಸ್ ನ ಕೆಲ ನಾಯಕರು ಅವರ ಬೆನ್ನ ಹಿಂದೆ ನಿಂತರು ಬಿಟ್ಟರೆ ಬೇರೆಯಾವ ನಾಯಕರು ಬಲವಾಗಿ ನಿಲ್ಲಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಚಿವರು ಸಮರ್ಪಕವಾಗಿ ಉತ್ತರ ನೀಡುವಲ್ಲಿ ವಿಫಲರಾದರು.
what is the purpose of BJP's politics?