ಹಬ್ಬದ ದಿನವೇ ಜಿಗಳಗೋಡಿನಲ್ಲಿ ಸೂತಕದ ಛಾಯೆ- Sutaka looms over Jigalagodu

Suddilive || Thirthahalli

ಹಬ್ಬದ ದಿನವೇ ಜಿಗಳಗೋಡಿನಲ್ಲಿ ಸೂತಕದ ಛಾಯೆ!The shadow of Sutaka looms over Jigalagodu on the day of the festival!

Sutaka, festival

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕರಲ್ಲಿ ಓರ್ವ ಸಾವನ್ನಪ್ಪಿದ್ದು ಯುಗಾದಿ ಹಬ್ಬದ ದಿನವೇ ಬಲಿ ಪಡೆದಂತಾಗಿದೆ.

ಕಿರಣ್ ( 20 ವರ್ಷ) ಮೃತಪಟ್ಟ ದುರ್ದೈವಿ. ತಾಲೂಕಿನ ಜಿಗಳಗೊಡು ಸಮೀಪದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಈಜಲು ತೆರಳಿದ್ದಾರೆ. ಜಾಸ್ತಿ ನೀರು ಇಲ್ಲದಿದ್ದರೂ ಈಜಲು ಸಾಧ್ಯವಾಗದೆ ಮೇಲೆದ್ದು ಬಾರದೆ ನೀರಿನ ಪಾಲಾಗಿದ್ದಾನೆ.  ಹಬ್ಬ, ಅಮಾವಾಸ್ಯೆ, ಹುಣ್ಣಿಮೆ ಸಂದರ್ಭದಲ್ಲಿ ನೀರಿಗೆ ಇಳಿಯುವುದು ಅಪಾಯಕಾರಿ ಎಂಬುವುದಕ್ಕೆ ಇಂದಿನ ಘಟನೆ ನಿದರ್ಶನವಾಗಿದೆ. 


ರಾಮೇಶ್ವರ ದೇವಸ್ಥಾನದ ಹಿಂಭಾಗ ಈಜಲು ತೆರಳಿದ್ದು ನಾಲ್ವರಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ. ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಲಿ ಘಟನೆ ಜರುಗಿದೆ.

Sutaka looms over Jigalagodu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close