MrJazsohanisharma

ಕೈಚಳಕ ತೋರಲು ಬೀಗ ಮುರಿದ ಖದೀಮರು-shop locks being broken

 suddilive || Shivamogga

ಕೈಚಳಕ ತೋರಲು ಬೀಗ ಮುರಿದ ಖದೀಮರು-Incidents of shop locks being broken have been detected in some major shops in the Garden Area and Nehru Roads of Shivamogga.

Shop, broken


ಶಿವಮೊಗ್ಗದ ಗಾರ್ಡನ್ ಏರಿಯಾ ಮತ್ತು ನೆಹರೂ ರಸ್ತೆಗಳಲ್ಲಿರುವ ಕೆಲ ಪ್ರಮುಖ ಅಂಗಡಿಗಳಲ್ಲಿ ಅಂಗಡಿಗಳ ಬೀಗ ಒಡೆದ ಘಟನೆಗಳು ಪತ್ತೆಯಾಗಿದೆ. 

ಗಾರ್ಡನ್ ಏರಿಯಾದ ಗಣೇಶ್ ಕೇಬಲಾಟ್ರಾನಿಕ್ಸ್, ದೇವಂಗಿ ಕಾಂಪ್ಲೆಕ್ಸ್ ನಲ್ಲಿರುವ ಪೈಪ್ ಅಂಗಡಿ ಕೆರ್ರಿ ಇನ್ ಡೇವ್, ಮತ್ತು ಎರಡನೇ ತಿರವಿನಲ್ಲಿರುವ ಅಂಗಡಿ ಮತ್ತು ನೆಹರೂ ರಸ್ತೆಯಲ್ಲೊರುವ ಮಾಜಿ ಶಾಸಕರಿಗೆ ಸೇರಿದ ಫಸ್ಟ್ ಕ್ರೈ ಅಂಗಡಿಯಲ್ಲಿ ಬೀಗ ಒಡೆದಿದ್ದು ಕಳ್ಖತನಕ್ಕೆ ಯತ್ನ ನಡೆದಿದೆ. 

ಅದೃಷ್ಟವಶಾತ್ ಯಾವ ಅಂಗಡಿಯಲ್ಲೂ ಕಳ್ಳತನವಾಗಿಲ್ಲವಾದರೂ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಕೆರ್ರಿ ಇನ್ ಡೈವ್ ನ ಅಂಗಡಿಯಲ್ಲಿ ಬೀಗ ಒಡೆದು ಕ್ಯಾಶ್ ಡ್ರಾ ವನ್ನ ಎಳೆದಿಟ್ಟು ಹೋಗಿದ್ದಾರೆ. ಫಸ್ಡ್ ಕ್ರೈ ನಲ್ಲಿ ಬೀಗ ಒಡೆದು ಬೀಗವನ್ನ ತೆಗೆದುಕೊಂಡೆ ಹೋಗಿದ್ದಾರೆ.

ಈ ಎಲ್ಲಾ ಅಂಗಡಿಗಳಲ್ಲಿ ಸಿಸಿ ಟಿವಿ ಫೂಟೇಜ್ ಗಳನ್ನ ಅಳವಡಿಸಲಾಗಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಧಾವಿಸಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗುವ ಸಾಧ್ಯತೆಯಿದೆ

shop locks being broken

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close