Suddilive || Shivamogga
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭದ್ರಾವತಿ ರೌಡಿ ಶೀಟರ್ಸ್? Bhadravati rowdy sheeters involved in illegal activities?
ಭದ್ರಾವತಿಯಲ್ಲಿ ಲಾಡ್ಜ್ ಒಂದರಲ್ಲಿ ಕೆಲ ಹುಡುಗರು ಹಣ ಫಣಕ್ಕಿಟ್ಟು ಇಸ್ಪೀಟ್ ಆಟವಾಡುತ್ತಿರುವ ಫೊಟೊವೊಂದು ವೈರಲ್ ಆಗಿದ್ದು, ಇವರೆಲ್ಲರೂ ರೌಡಿ ಶೀಟರ್ ಗಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಭದ್ರಾವತಿಯ ಲಾಡ್ಜ್ ವೊಂದರಲ್ಲಿ ಕೆಲ ಯುವಕರು ಹಣವನ್ನ ಫಣಕ್ಕಿಟ್ಟು ಇಸ್ಪೀಟ್ ಆಟ ವಾಡಿದ್ದಾರೆ. ಈ ಎಲ್ಲದರ ಮಧ್ಯೆ ಫೋಟೊದಲ್ಲಿ ಕ್ರೀಂ ಶರ್ಟ್ ಧರಿಸಿ ಕೂತವರು ಶಾಸಕರ ಪುತ್ರರು ಎಂದು ಬಿಂಬಿಸಲಾಗಿತ್ತು.
ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಅದು ಅವರಲ್ಲ ಎಂಬ ಸ್ಪಷ್ಠೀಕರಣ ದೊರೆತಿದೆ. ಖುದ್ದು ಶಾಸಕರ ಪುತ್ರರೇ ಈ ಸ್ಪಷ್ಟೀಕರಣ ನೀಡಿದ್ದಾರೆ. ಮತ್ತಾರಿರಬಹುದು ಎಂಬ ಮಾಹಿತಿಗೆ ಕೆಲ ರೌಡಿ ಶೀಟರ್ ಗಳ ಹೆಸರು ತೇಲಿ ಬಂದಿದೆ. ಒಟ್ಟಿನಲ್ಲಿ ಭದ್ರಾವತಿಯಲ್ಲಿ ರೌಡಿ ಶೀಟರ್ ಗಳು ಕಾನೂನು ಬಾಹಿರ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇಸ್ಪೀಟ್ ಎಲೆ ಮತ್ತು ಹಣದ ಜೊತೆ ಕುಳಿತಿರುವುದು ರೌಡಿ ಶೀಟರ್ ಗಳೆಂದು ಹೇಳಲಾಗುತ್ತಿದೆ. ಶೆಡ್ ಸೋಮಾ, ಹುಡುಗರ ಗ್ಯಾಂಗ್ ಕಟ್ಟಿಕೊಂಡು ಈ ಇಸ್ಪೀಟ್ ಆಟವಾಡುತ್ತಿರುವುದಾಗಿ ಕೇಳಿ ಬರುತ್ತಿದೆ. ಇವರೆಲ್ಲಾ ಅವರೇನಾ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
rowdy sheeters involved in illegal activities?