Suddilive || Shivamogga
ಯತ್ನಾಳ್ ಉಚ್ಚಾಟನೆ, ಕಾರ್ಯಕರ್ತರು ಎದೆ ಹೊಡೆದುಕೊಳ್ಳುವ ಅವಶ್ಯಕತೆಯಿಲ್ಲ-ಶಾಸಕ ಚೆನ್ನಿ- no need for activists to beat their chests-MLA Chenni
ಬಿಜೆಪಿ ಶಿಸ್ತಿಗೆ ಹೆಸರುವಾಸಿಯಾದ ಪಕ್ಷ, ಬಿಜೆಪಿ ಪಕ್ಷ ಅಶಿಸ್ತು ಸಹಿಸೊಲ್ಲ, ಅಶಿಸ್ತು ಪಾಲನೆ ಮಾಡಿದ್ರೆ ನಮ್ಮ ಪಕ್ಷದಲ್ಲಿ ಸ್ಥಾನ ಇರುವುದಿಲ್ಲ, ಯಾರು ಪಕ್ಷಕ್ಕೆ ಶೋಭ ತರುವುದಿಲ್ವೊ ಅವರ ಮೇಲೆ ಪಕ್ಷ ಕ್ರಮ ತೆಗೆದುಕೊಂಡಿರುವುದು ಅನಿವಾರ್ಯ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಯತ್ನಾಳ್ ಉಚ್ಚಾಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಅಶಿಸ್ತು ವರ್ತನೆ ಕಾರ್ಯಕರ್ತನಿಂದ ದೊಡ್ಡ ಮಟ್ಟದ ನಾಯಕನವರೆಗೆ ಶಿಸ್ತು ಮೀರಿದರೆ ಕ್ರಮವಾಗುತ್ತದೆ, ಸ್ವಲ್ಪ ತಡವಾಗಬಹುದು ಆದರೆ ಶಿಸ್ತು ಕ್ರಮದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
ಪಕ್ಷದ ನಿಯಮ ಉಲ್ಲಂಘನೆ ಮಾಡಿದ ಯತ್ನಾಳ್ ಉಚ್ಚಾಟನೆಯಾಗಿದೆ ಕಾರ್ಯಕರ್ತರು ಇದನ್ನು ಸಹಜವಾಗಿ ತೆಗೆದುಕೊಳ್ಳಬೇಕು ಎಂದರು. ಅಶಿಸ್ತು ಪಾಲನೆ ಮಾಡಿದ್ರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ, ಈಗ ಆ ಕ್ರಮ ಆಗಿದೆ, ಭಂಡತನಕ್ಕೆ ನಾನು ಏನು ಮಾಡಲು ಸಾಧ್ಯವಾಗುವುದಿಲ್ಲ, ಯತ್ನಾಳ್ ಪಕ್ಷಕ್ಕೆ ಎದುರಿವುದು ಎಂದ್ರೆ, ಪಕ್ಷ ಯಾರಿಗೂ ಎದುರುವುದಿಲ್ಲ, ಪಕ್ಷ ಮತ್ತಷ್ಟು ಬಲಪಡಿಸಲು ನಮ್ಮ ಪಕ್ಷ ಶ್ರಮಿಸುತ್ತದ ಎಂದರು.
ಉಮಾಭಾರತಿಯರನ್ನ ಉಚ್ಚಾಟನೆ ಮಾಡಲಾಗಿತ್ತು. ಅಶಿಸ್ತಿನಿಂದ ಕೂಡಿದರೆ ಕ್ರಮ ತೆಗೆದುಕೊಳ್ಳಲಾಗಿದೆ. ಚೆನ್ನಿನೇ ಅಶಸ್ತಿನಿಂದ ನಡೆದುಕೊಂಡರೆ ಪಕ್ಷ ಕ್ರಮಕೈಗೊಳ್ಳಲಿದೆ ಎಂದು ವಿವರಿಸಿದರು.
ಜಯಮೃತ್ಯುಂಜಯ ಸ್ವಾಮಿ ಯತ್ನಾಳ್ ನ್ನ ಕೈಬಿಟ್ಟಿರುವುದು ಮುಂದಿನ ಚುನಾವಣೆಯಲ್ಲಿ ಬಿಜೆಪಿ 36 ಕ್ಷೇತ್ರವನ್ನ ಗೆಲ್ಲಲ್ಲ ಎಂದಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು ಇರಬಹುದು ಆದರೆ ಶಿಸ್ತನ್ನ ಪಕ್ಷ ಬಿಡಲ್ಲ. ಪಕ್ಷ ಸೊನ್ನೆಯಿಂದ ಬೆಳೆದಿದೆ. ಪಕ್ಷವನ್ನ ಬೆಳೆಸಲು ಅಧಿಕಾರವಿದೆ ಕೆಡವಲು ಅಧಿಕಾರವಿಲ್ಲ ಎಂದು ತಿಳಿಸಿದರು.
ಯಾವುದೇ ಸಂದರ್ಭದಲ್ಲೂ ನಾಲ್ಕು ಗೋಡೆ ಮಧ್ಯೆ ಕುಳಿತು ಸಮಸ್ಯೆ ಬಗೆಹರಿಸಲು ಪಕ್ಷದಲ್ಲಿ ಅವಕಾಶ ಕಲ್ಪಿಸಿದೆ. ಅದನ್ನ ಮಾಡಬೇಕು. ಜಯಮೃತ್ಯುಂಜಯ ಸ್ವಾಮಿ ಪ್ರತಿಭಟಿಸುತ್ತಿದ್ದಾರೆ. ಇದು ಸಹಜ ಪ್ರಕ್ರಿಯೆ, ಅದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಈ ಪ್ರಕರಣದಿಂದ ಕಾರ್ಯಕರ್ತರು ಎದೆ ಹೊಡೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದರು.
no need for activists to beat their chests - MLA Chenni