SSLC ಅಂಕಪಟ್ಟಿಯನ್ನ ತಿದ್ದುಪಡಿ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಆರೋಪ, ಆರೋಪಿಗಳಿಗೆ ಶಿಕ್ಷೆ ಪ್ರಕಟ-modifying SSLC marksheet

Suddilive || Shivamogga

 SSLC ಅಂಕಪಟ್ಟಿಯನ್ನ ತಿದ್ದುಪಡಿ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಆರೋಪ, ಆರೋಪಿಗಳಿಗೆ ಶಿಕ್ಷೆ ಪ್ರಕಟ-Accused of getting government benefits by modifying SSLC marksheet, punishment announced for the accused

SSLC, Modifying


SSLC ಅಂಕಪಟ್ಟಿಯನ್ನ ತಿದ್ದಪಡಿ ಮಾಡಿ ಮೆಸ್ಕಾಂ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ.  

2016 ರಲ್ಲಿ ಗಣೇಶ್ ಗೌಡ ಬಿ ಜಿ ಮತ್ತು ಬಿ.ಬಿ. ಗೀರಿಶ್ ಇವರು  MESCOM ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗ, SSLC ಯ ಮೂಲ ಅಂಕಪಟ್ಟಿಯ ಬದಲಾಗಿ ಜೆರಾಕ್ಸ್ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದು, ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಇಮ್ರಾನ್ ಬೇಗ್ ಪಿ.ಎಸ್.ಐ ಜಯನಗರ  (ಹಾಲೀ ಪಿ.ಐ. ತೀರ್ಥಹಳ್ಳಿ) ಪೊಲೀಸ್ ಠಾಣೆ  ರವರು ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ಸಹಾಯಕ  ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು, ಘನ 4 ನೇ ಹೆಚ್ಚುವರಿ ಸಿ,ಜೆ & ಜೆ,ಎಮ್,ಎಫ್,ಸಿ ನ್ಯಾಯಾಲಯ ಶಿವಮೊಗ್ಗದಲ್ಲಿ  ಪ್ರಕರಣದ ವಿಚಾರಣೆ ನಡೆದು  ನ್ಯಾಯಾಧೀಶರಾದ ಶಿವಕುಮಾರ್ ಜಿ,ಎನ್  ರವರು ಮಾ.26 ರಂದು ಆರೋಪಿ 1) ಶ್ರೀ ಗಣೇಶ್ ಗೌಡ ಬಿ.ಜಿ.ಎಂ, 23 ವರ್ಷ, ವಾಸ ಬೆನಕನ ಹಳ್ಯಾರ ನಿಲಯ ಕೋಟೆ ಬೀದಿ ,ಅರುಂದಿ ಗ್ರಾಮ ,ಹೊನ್ನಾಳಿ ತಾಲ್ಲುಕು  ದಾವಣಗೆರೆ ಜಿಲ್ಲೆ 2)  ಬಿ.ಬಿ. ಗೀರಿಶ್, 27  ವರ್ಷ, ವಾಸ ಬಾದರಗಟ್ಟೆ ನಿಲಯ ಬಾಡ ರಸ್ತೆ ಕಂದಗಲ್ ಗ್ರಾಮ ದಾವಣಗೆರೆ ತಾಲ್ಲುಕು ಇವರುಗಳ  ವಿರುದ್ಧ ವಂಚನೆ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ ಕಲಂ 420 ಸಹಿತ 34 ಐಪಿಸಿ ಗೆ 2 ವರ್ಷ ಸಜೆ 4000 ರೂ ದಂಡವನ್ನು ಹಾಗೂ ಕಲಂ 465 ಐಪಿಸಿ ಗೆ 6 ತಿಂಗಳು ಸಜೆ  ಹಾಗೂ ಕಲಂ 468 ಸಹಿತ 34 ಐಪಿಸಿಗೆ 2 ವರ್ಷ ಸಜೆ ಹಾಗೂ  4000 ರೂ ಮತ್ತು ಕಲಂ 471 ಸಹಿತ 34 ಐಪಿಸಿಗೆ 6 ತಿಂಗಳ ಕಾಲ ಸಜೆ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

modifying SSLC marksheet

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close