Suddilive || Shivamogga
ನಿನ್ನೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಿಂದ ಸಚಿವ ಮಧು ಬಂಗಾರಪ್ಪ ಹೊರನಡೆದಿದ್ದೇಕೆ? Why did Minister Madhu Bangarappa walk out of the Congress workers' meeting yesterday?
ನಾಮನಿರ್ದೇಶನ ಸ್ಥಾನವನ್ನ ನಾಗರಾಜ್ ಗೌಡರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರಿಗೆ ನೀಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಎದುರೆ ಶಿಕಾರಿಪುರದಲ್ಲಿ ಎರಡು ಬಣಗಳ ನಡುವೆ ಗಲಾಟೆಯಾಗಿದೆ.
ನಿನ್ನೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ನೇರಲಗಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆವೇಳೆ ಕೈ ಕಾರ್ಯಕರ್ತರ ನಡುವೆ ಗಲಾಟೆ ಮಾಡಿಕೊಂಡಿದ್ದಾರೆ. ಉಸ್ತುವಾರಿ ಸಚಿವರ ಮುಂದೆಯೇ ಕೈ ಕಾರ್ಯಕರ್ತರ ಗಲಾಟೆ ನಡೆದಿದ್ದು ಅವರನ್ನ ಸಮಾಧಾನ ಮಾಡುವಲ್ಲಿ ಸಚಿವರೂ ಸಹ ಕೈಚೆಲ್ಲಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.
ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ನಾಗರಾಜ್ ಗೌಡ ಸ್ಥಾನ ಹಂಚಿಕೆಯಲ್ಲಿ ತಮ್ಮ ಕುಟುಂಬದವರಿಗೆ ನೀಡಿದ್ದಾರೆ ಎಂದು ಆರೋಪಿಸಿ ನಾಗರಾಜ್ ಗೌಡ ಹಾಗೂ ಗೋಣಿ ಮಾಲತೇಶ್ ಬಣಗಳ ನಡುವೆ ಗಲಾಟೆಯಾಗಿದೆ. ಪರ ವಿರೋಧ ಘೋಷಣೆಗಳನ್ನ ಕೂಗಲಾಗಿದೆ.
ನಾಗರಾಜ್ ಗೌಡ ಕುಟುಂಬದಲ್ಲಿ ಓರ್ವ ಆರ್ ಎಸ್ ಎಸ್ ಕಾರ್ಯಕರ್ತ ಇದ್ದಾರೆ. ಅವರಿಗೆ ಕಾರ್ಯಕರ್ತರಿಗೆ ನೀಡುವ ಸ್ಥಾನವನ್ನು ನೀಡಲಾಗಿದೆ ಎಂದು ಮತ್ತೊಂದು ಬಣ ಆರೋಪಿಸಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಬೇಕಿದ್ದ ನಾಮ ನಿರ್ದೇಶಕ ಹುದ್ದೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕೆಲವರಿಗೆ ನೀಡಲಾಗಿದೆ ಎಂದು ಆರೋಪಿಸಿ ಈ ಗಲಾಟೆ ನಡೆದಿದೆ.
Madhu Bangarappa walk out of the Congress workers' meeting