Suddilive || Shivamogga
ತರಾತುರಿಯಲ್ಲಿ ಒಳಮೀಸಲಾತಿ ಜಾರಿಯಾಗಬಾರದು ವಿದ್ಯಾರ್ಥಿ ಸಂಘ ಆಗ್ರಹ -Student union demands that internal reservation should not be implemented in a hurry
ಒಳ ಮೀಸಲಾತಿಯ ಜಾರಿಗೆ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ವರದಿಯನ್ನ ತರಾತುರಿಯಾಗಿ ಜಾರಿಗೆ ತರದೆ, ಸಾಕಷ್ಟು ಸಮಯ ಪಡೆದು ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ರಾಜ್ಯ ಸರ್ಕಾರವನ್ನ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್, ಒಳ ಮೀಸಲಾತಿ ವಿಚಾರದಲ್ಲಿ ಎರಡು ಮೂರು ದಶಕದಿಂದ ಹೋರಾಟ ನಡೆಯುತ್ತಾ ಬಂದಿದೆ. 2024 ಆಗಸ್ಟ್ ನಲ್ಲಿ ಸುಪ್ರೀಂ ಚಂದ್ರಚೂಡ್ ಅವರ ನ್ಯಾಯಪೀಠ ಒಳ ಮೀಸಲಾತಿಯನ್ನ ಆಯಾ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟು ಆದೇಶಿಸಿದೆ.
ನಿವೃತ್ತ ಜಸ್ಟೀಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಮಾ.27 ರಂದು 104 ಪುಟಗಳ ಒಳಮೀಸಲಾತಿಯ ಕುರಿತು ಮಧ್ಯಂತರ ವರದಿಯನ್ನ ಸರ್ಕಾರಕ್ಕೆ ನೀಡಲಾಗಿದೆ. ರಾಜ್ಯದ ಪರಿಶಿಷ್ಟ ಜಾತಿಗಳ ಉಪಜಾತಿಗಳ ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಹೊಸ ಸಮೀಕ್ಷೆ ನಡೆಸಲು ಎರಡು ತಿಂಗಳುಗಳ ಕಾಲ ಕಾಲಾವಕಾಶ ಕೋರಿ ರಾಜ್ಯ ಸಚಿವ ಸಂಪುಟ ವರದಿಗೆ ಒಪ್ಪಿಗೆ ಸೂಚಿಸಿದೆ ಎಂದರು.
ಜನಸಂಖ್ಯೆ ನಿಖರ ಮಾಹಿತಿ ಇಲ್ಲ. ನಾಗಮೋಹನ್ ದಾಸ್ ಪ.ಜಾ. ಪಂಗಡವನ್ನ ಉಪಜಾತಿಗಳ ವರ್ಗೀಕರಣ ಮಾಡಲು ಹೊಸ ಸಮೀಕ್ಷೆ ನಡೆಸಲು ತೀರ್ಮಾನಿಸಿರುವುದನ್ನ ಸಂಘಟನೆ ಸ್ವಾಗತಿಸಿದೆ. ಆದರೆ ವರದಿಯ ಶಿಫಾರಸ್ಸಿನಂತೆ ಆಧುನಿಕ, ವಿಜ್ಞಾನ ತಂತ್ರಜ್ಞಾನ ಸಾಧನಗಳನ್ನ ಬಳಸಿ 30 ರಿಂದ 40 ದಿನಗಳಲ್ಲಿ ಹೊಸ ಸಮೀಕ್ಷೆ ನಡೆಸಬಹುದು ಎಂದಿರುವುದನ್ನ ಮರಿಪರಿಶೀಲಿಸಲು ಗಿರೀಶ್ ಒತ್ತಾಯಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.4.5 ರಷ್ಟು ಒಳಮೀಸಲಾತಿಯನ್ನ ಶಿಫಾರಸ್ಸು ಮಾಡಿತ್ತು. ಅದಕ್ಕಿಂತ ಕಡಿಮೆ ಮೀಸಲಾತಿಯನ್ನ ಶಿಫಾರಸ್ಸು ಮಾಡಿದರೆ ಸಂಘಟನೆ ವಿರೋಧಿಸಲಿದೆ. ಆಧ್ಯತೆಯ ಮೇರೆಗೆ ಅಂಕಿ ಅಂಶಗಳನ್ನ ಆಧರಿಸಿ ಮೀಸಲಾತಿಯನ್ನ ಜಾರಿಮಾಡುವಂತೆ ಅವರು ವಿನಂತಿಸಿದರು.
internal reservation should not be implemented in a hurry