ಸಾರ್ವಜನಿಕವಾಗಿ ಗನ್ ಹಿಡಿದು ಭಯ ಹುಟ್ಟಿಸಿದ ವ್ಯಕ್ತಿ!fear by holding a gun in public!

 Suddilive || Shivamogga

ಸಾರ್ವಜನಿಕವಾಗಿ ಗನ್ ಹಿಡಿದು ಭಯ ಹುಟ್ಟಿಸಿದ ವ್ಯಕ್ತಿ !  A man who caused fear by holding a gun in public!

Gun, fear


ನಗರದ ಹೊರವಲಯದ ವಿಮಾನ ನಿಲ್ದಾನ ನಿಲ್ದಾಣ ಸಮೀಪದ ಕಾಚಿನಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಹಾಡುಹಗಲೇ ಗನ್ ಹಿಡಿದು ಓಡಾಡುವ ಭಯ ಹುಟ್ಟಿಸುತ್ತಿರುವುದು ಬೆಳಕಿಗೆ ಬಂದಿದೆ.


ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಾಚಿನಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ಗನ್ ಹಿಡಿದು ಅಲ್ಲಿನ ಹೋಟೆಲ್‌ವೊಂದಕ್ಕೆ ಬಂದಿದ್ದಾರೆ. ಹೋಟೆಲ್‌ನ ಖುರ್ಚಿಯಲ್ಲಿ ಕುಳಿತುಕೊಳ್ಳುವ ಅವರು ಟೇಬಲ್ ಮೇಲೆ ಗನ್ ಇಡುತ್ತಾರೆ. ಆನಂತರ ಎದುರಿಗೆ ಪುಟ್ಟ ಮಗುವಿನ ಜತೆ ಬಂದಿದ್ದ ಮತ್ತೊಬ್ಬ ವ್ಯಕ್ತಿಗೆ ಗನ್ ತೋರಿಸಿ ಬೆದರಿಕೆ ಹಾಕಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತುಂಗಾನಗರ ಠಾಣಾ ವ್ಯಾಪ್ತಿಯ ಕಾಚಿನಕಟ್ಟೆ ಭಾಗದಲ್ಲಿ ಆತನ ವರ್ತನೆ ಸಾರ್ವಜನಿಕರಲ್ಲಿ ಭಯವನ್ನು ಮೂಡಿಸುತ್ತಿದೆ. ಹಲವಾರು ಬಾರಿ ಆತ ಸಾರ್ವಜನಿಕವಾಗಿಯೇ ಗನ್ ಹಿಡಿದು ಮನೆಯಿಂದ ಹೊರಬರುತ್ತಿದ್ದು, ರಸ್ತೆ, ಹೋಟೆಲ್ ಮತ್ತಿತರರ ಸ್ಥಳಗಳಲ್ಲಿ ಓಡಾಡುತ್ತಾ ಗನ್ ತೋರಿಸುತ್ತಾರೆಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ. ಈ ಬಗ್ಗೆ ತುಂಗಾನಗರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಏರ್ ಗನ್ ಎಂದು ತಿಳಿದು ಬಂದಿದೆ. 

ಸದಾ ಗನ್ ಹಿಡಿದುಕೊಂಡೇ ಓಡಾಡುವ ಕಾರಣ ಆತನ ಜತೆ ಮಾತನಾಡುವುದಕ್ಕೂ ಜನರು ಹೆದರುತ್ತಿದ್ದಾರೆ. ಪೊಲೀಸರು ಆತನನ್ನು ಕರೆದು ವಿಚಾರಣೆ ನಡೆಸಿ ಗನ್‌ಗೆ ಪರವಾನಗಿ ಪಡೆದುಕೊಂಡಿದ್ದಾರೋ ಅಥವಾ ಅನಧಿಕೃತವಾಗಿ ಇಟ್ಟುಕೊಂಡಿದ್ದಾರೋ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close