Suddilive || Shivamogga
ಡಿಸಿಎಂ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ-BJP protests by burning DCM's effigy
ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ವಿರುದ್ಧ ಇಂದು ಜಿಲ್ಲಾ ಬಿಜೆಪಿ ಪ್ರತಿಭಟಿಸಿದೆ ಡಿಸಿಎಂ ಡಿಕೆಶಿ ಅವರ ಪ್ರಕೃತಿಯನ್ನ ಸುಡುವ ಮೂಲಕ ಪ್ರತಿಭಟಿಸಲಾಗಿದೆ.
ಇಂದು ಬೆಳಗ್ಗೆ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಶಿವಮೊಗ್ಗ ನಗರದ ಶಿವಪ್ಪ ನಾಯ್ಕ ವೃತ್ತದಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ನಾಲಿಗೆ ಹರಿಬಿಟ್ಟ ಡಿಸಿಎಂ ಡಿಕೆ ಶಿವಕುಮಾರ್ ರವರ ಪ್ರಕೃತಿ ದಹನ ಮಾಡಿ ಪ್ರತಿಭಟನೆ ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಅವರ ನೇತೃತ್ವದಲ್ಲಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್ ಕೆ ಜಗದೀಶ್, ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ಜಿಲ್ಲಾ ಪ್ರಮುಖರಾದ ವೀರಭದ್ರ ಪೂಜಾರಿಯವರು , ಮಾತನಾಡಿ ನಾಲಿಗೆ ಹರಿಬಿಟ್ಟ ಡಿ ಕೆ ಶಿವಕುಮಾರ್ ಅವರನ್ನು ಸರಕಾರದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಸಿ ಹೆಚ್, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ದೀನ್ ದಯಾಳ್, ಹಾಗೂ ಪದಾಧಿಕಾರಿಗಳು, ಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
burning DCM's effigy