ಯುಗಾದಿಯ ಚಂದ್ರ ದರ್ಶನ- Moon sighting on Ugadi

 suddilive || Shivamogga

ಯುಗಾದಿಯ ಚಂದ್ರ  ದರ್ಶನ- Moon sighting on Ugadi 

Moon, sighting


ನಗರದಲ್ಲಿ ಇವತ್ತು ಯುಗಾದಿಯ ಚಂದ್ರ  ದರ್ಶನವಾಯಿತು. ಚಂದ್ರನನ್ನು ಕಣ್ತುಂಬಿಕೊಂಡ ಜನರು ಪೂಜೆ ಸಲ್ಲಿಸಿ, ಕೈ ಮುಗಿದರು. ಬೇವು ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು

ಯುಗಾದಿ ಹಬ್ಬದಂದು ಚಂದ್ರ ದರ್ಶನ ಮಾಡಬೇಕು. ಭಾನುವಾರ ಚಂದ್ರ ಕಾಣಿಸಿದ ಹಿನ್ನೆಲೆ ಇವತ್ತು ಸಂಜೆ ವೇಳೆಗೆ ಜನರು ಆಗಸದತ್ತ ಕಣ್ಣು ನೆಟ್ಟಿದ್ದರು. ಮನೆಗಳ ಟೆರೇಸ್‌ ಮೇಲೆ, ರಸ್ತೆಗಳು, ಖಾಲಿ ಜಾಗದಲ್ಲಿ ನಿಂತು ಚಂದ್ರ ದರ್ಶನ ಮಾಡಿದರು. ಚಂದ್ರ ಕಾಣಿಸುತ್ತಿದ್ದಂತೆ ಪೂಜೆ ಸಲ್ಲಿಸಿ, ಹಿರಿಯರಿಗೆ ನಮಸ್ಕರಿಸಿ, ಬೇವು ಬೆಲ್ಲ ಹಂಚಿದರು. 

ನಗರದ ವಿವಿಧೆಡೆ ಜನರು ತಂಡೋಪ ತಂಡವಾಗಿ ರಸ್ತೆಯಲ್ಲಿ ನಿಂತು ಚಂದ್ರ  ದರ್ಶನ ಮಾಡಿದರು. ಚಂದ್ರನ ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

Moon sighting on Ugadi 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close