Suddilive || Shivamogga
ಖಾಸಗಿ ಗೋದಾಮಿನ ಮೇಲೆ ತೆರಿಗೆ ಅಧಿಕಾರಿಗಳ ದಾಳಿ-Tax officials raid private warehouse
ಸಮೀಪದ ಅರಹತೊಳಲು ಕೈಮರದ ಖಾಸಗಿ ಗೋದಾಮಿನ ಮೇಲೆ ದಾಳಿ ನಡೆಸಿದ ತೆರಿಗೆ ಅಧಿಕಾರಿಗಳು ಅನಧಿಕೃತವಾಗಿ ದಾಸ್ತಾನು ಮಾಡಿದ ೨೮೦ ಚೀಲ ಅಡಿಕೆಯನ್ನು ಪರೀಶಿಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ಬೆಳಗ್ಗೆ ಕೈಮರದ ಚಂದ್ರಪ್ಪ ಎಂಬುವರಿಗೆ ಸೇರಿದ ಗೋಡೌನ್‌ನಲ್ಲಿ ಅಡಿಕೆ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ತೆರಿಗೆ ಅಧಿಕಾರಿ ಕಮ್ಮಲಮ್ಮ ನೆತೃತ್ವದ ತಂಡ ೨೮೦ ಚೀಲ ಅಡಿಕೆಯ ಬಗ್ಗೆ ದಾಖಲೆ ಕೇಳಿದ್ದಾರೆ. ಗೋಡೌನ್ ಮಾಲೀಕ ಚಂದ್ರಪ್ಪ ಮಾಹಿತಿ ನೀಡಿ ನಮ್ಮ ತೋಟದಲ್ಲಿ ಬೆಳೆದಿರುವ ಅಡಿಕೆಯನ್ನು ೩ ವರ್ಷದಿಂದ ಮಾರಾಟ ಮಾಡದೆ ದಾಸ್ತಾನು ಮಾಡಿದ್ದೆವೆ. ಗೋದಾಮನ್ನು ಬಾಡಿಗೆ ನೀಡಿಲ್ಲ ಎಂದು ಕೆಲ ದಾಖಲೆ ತೋರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ದಾಸ್ತಾನಿರುವ ಅಡಿಕೆ ಮಾರಾಟ ಮಾಡುವುದಾಗಿ ಹೇಳಿ ಅಧಿಕಾರಿಗಳನ್ನು ವಾಪ್ಫಾಸ್ ಕಳಿಸಿದ್ದಾರೆ.
ಸೋಮವಾರ ತಡರಾತ್ರಿ ಗೋದಾಮ್ಮಿನಲ್ಲಿದ ೨೫೦ ಕ್ಕೂ ಹೆಚ್ಚು ಚೀಲಗಳನ್ನು ಅನಧಿಕೃತವಾಗಿ ಸಾಗಾಟ ಮಾಡಿದ್ದಾರೆ. ಅಡಿಕೆ ಚೀಲಗಳನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ತಿಳಿದ ತೆರಿಗೆ ಅಧಿಕಾರಿಗಳು ತಡರಾತ್ರಿ ಗೋದಾಮಿನ ಮೇಲೆ ಮತ್ತೊಮ್ಮೆ ದಾಳಿ ಮಾಡಿ ಉಳಿದಿದ್ದ ೨೩ ಕ್ವಿಂಟಾಲ್ ಅಡಿಕೆ ಹಾಗೂ ಎಮ್ಮೆಹಟ್ಟಿ ಮೂಲದ ಕ್ಯಾಂಟರ್ ಒಂದನ್ನು ಜಪ್ತಿ ಮಾಡಿದ್ದಾರೆ ಪ್ರಕರಣ ದಾಖಲಿಸಿದ್ದಾರೆ. ರೈತ ಸಂಘಟನೆಗಳ ಕೆಲ ರೈತರು ಒಟ್ಟಾಗಿ ಅಡಿಕೆ ಶೇಖರಿಸಿಟ್ಟುಕೊಂಡಿದ್ದಾರೆ ತೆರಿಗೆ ಅಧಿಕಾರಿಗಳು ವಿನಾಃ ಕಾರಣ ರೈತರಿಗೆ ತೊಂದರೆ ನೀಡುತ್ತಿದ್ದಾರೆಂದು ಅಡಿಕೆ ಜಪ್ತಿಗೆ ಬಂದಿದ ಅಧಿಕಾರಿಗಳೊಂದಿಗೆ ಮಾತಿನ ಚಕಮಕ್ಕಿ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಳೆದ ಮರ‍್ನಾಲ್ಕು ದಿನದಿಂದ ಗೋದಾಮಿನ ಬಗ್ಗೆ ಮಾಹಿತಿ ಕಲೆ ಹಾಕಿರುವ ತೆರಿಗೆ ಅಧಿಕಾರಿಗಳು ಎಮ್ಮೆಹಟ್ಟಿ ಮೂಲದ ಅಡಿಕೆ ವ್ಯಾಪಾರಿಯೊಬ್ಬರಿಗೆ ಗೊದಾಮುನ್ನು ಖಾಸಗಿಯಾಗಿ ಬಾಡಿಗೆ ನೀಡಿರುವುದನ್ನು ದೃಡಪಡಿಸಿದ್ದಾರೆ. ಇದೇ ಗೋದಾಮಿನಿಂದ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿ ಅಡಿಕೆ ವಹಿವಾಟು ಮಾಡಲಾಗಿದೆ. ಎಲ್ಲವನ್ನೂ ಸೂಕ್ಷö್ಮವಾಗಿ ಪರೀಶಿಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈ ಗೊಳುವುದಾಗಿ ತೆರಿಗೆ ಅಧಿಕಾರಿಗಳು ರೈತ ಮುಖಂಡರಿಗೆ ತಿಳಿಸಿದ್ದಾರೆ.
Tax officials raid private warehouse