ಶಿವಮೊಗ್ಗ ನಗರ ಕಸದ ತೊಟ್ಟಿಯಾಗಿದೆ

Suddilive || Shivamogga

ಶಿವಮೊಗ್ಗ ನಗರ ಕಸದ ತೊಟ್ಟಿಯಾಗಿದೆ-Shivamogga city has become a garbage dump

Eshwarappa, garbage

ಚುನಾಯಿತ ಪ್ರತಿನಿಧಿಗಳು ಇಲ್ಲದೆ ಶಿವಮೊಗ್ಗ ನಗರ ಎಷ್ಟರ ಮಟ್ಟಿಗೆ ಕಸದ ತೊಟ್ಟಿಯಾಗಿದೆ ಎಂದು ಉಪಲೋಕಾಯುಕ್ತರು ಹೇಳಿದ್ದಾರೆ. 

ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಾರಿ 12 ಕೋಟಿ ರೂಪಾಯಿಯನ್ನು ಆಶ್ರಯ ಮನೆಗಳ ಮೂಲಭೂತ ಸೌಕರ್ಯಗಳಿಗೆ ಬಿಡುಗಡೆ ಮಾಡಿಸುತ್ತೇನೆ ಎಂದು 6 ತಿಂಗಳಾಯಿತು. ಹೀಗಿರುವಾಗ ಉಪಲೋಕಾಯುಕ್ತರ ಎಷ್ಟು ಹಣ ಬೇಕಾದರೂಪಾತ್ರ ಬರೆಯಿರಿ ಕಲಿಸುತ್ತೇನೆ ಎಂದದ್ದು ಸಂತೋಷದ ಸಂಗತಿ. 

ರಾಜ್ಯ ಸರ್ಕಾರ ಮೀಸಲಾತಿ ಘೋಷಿಸಿದರೆ ಸರಿ. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಶಿವಮೊಗ್ಗ ಮಹಾನಗರ ಚುನಾವಣೆಯನ್ನು ನಡೆಸಬೇಕು. ಚುನಾವಣೆ ಆಯುಕ್ತರ ಬಳಿ ಮತ್ತೊಮ್ಮೆ ಹೋಗುವುದಿಲ್ಲ. ಮತ್ತೊಮ್ಮೆ ತಕ್ಷಣ ಮಹಾನಗರ ಪಾಲಿಕೆ ಚುನಾವಣೆಯನ್ನು ನಡೆಸಬೇಕು ಎಂದು ಒತ್ತಾಯ ಮಾಡಿದರು. 

ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧವನ್ನು ಕಟ್ಟಿದ್ದಂತವರು. ವಿಧಾನ ಸೌಧವನ್ನೇ ಇಷ್ಟು ಕೀಳು ಮತ್ತದ ರಾಜಕೀಯ ಚರ್ಚೆ ವಿಧಾನ ಸೌಧದಲ್ಲಿ ಆಗಿಲ್ಲ. ಒಬ್ಬ ಮಂತ್ರಿಯೂ ಆಗಿರುವಂತಹ ರಾಜಣ್ಣ ಅವರು ಬಳಸಿದ ಪದಗಳನ್ನು ನೋಡಿದರೆ ಅಸಹ್ಯವಾಗುತ್ತದೆ. ರಾಜಣ್ಣನ ನೀಚಟನದಿಂದ ಇಂದು ಟಿವಿ ಎನ್ನು ನೀಡುವುದು ಕಷ್ಟವಾಗಿದೆ. ಕರ್ನಾಟಕದಲ್ಲಿ ಇಂತಹ ಮಂತ್ರುಗಳಿದ್ದಾರೆ ಎಂದು ನಾಚಿಕೆ ಆಚುತ್ತದೆ. 

ಮಾನ್ಯ ಖಾದರ್ ಅವರು 18 ಜನ ಶಾಸಕರನ್ನು ಹೊರ ಹಾಕುವುದರ ಮೂಲಕ ತಮ್ಮ ಖದರ್ ತೋರಿಸಿದ್ದಾರೆ. ವಿಧಾನ ಸೌಧ ಪ್ರಜಾ ಪ್ರಭುತ್ವದ ದೇವಾಲಯ. ಅಶ್ಲೀಲ ಪದಗಳನ್ನು ಬಳಸಿದ ಮಂತ್ರಿಯನ್ನು ಹೊರಹಾಕದೆ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ. 

ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಬರದೇ  ಸಿದ್ದರಾಮಯ್ಯ ನವರೇ ಉಳಿಯಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಪ್ರಜಾ ಪ್ರಭುತ್ವ ದೇವಾಲಯವನ್ನು ಕಳಂಕಿತ ಮಾಡಿದ್ದಾರೆ. ಇದಕ್ಕೆ ಮುಖ್ಯ ಮಂತ್ರಿಗಳು ಕ್ಷಮೆ ಕೇಳಬೇಕು. 

ಮುಸಲ್ಮಾನರಿಗೆ ಶೇ.4 ರಷ್ಟು ಮೀಸಲಾತಿ. ತುಂಬಾ ಸ್ಪಷ್ಟವಾಗಿ ಸಂವಿಧಾನ ಹೇಳಿದೆ. ರಾಜಣ್ಣ ಅವರ ಪ್ರಕರಣ ಇರಬಹುದು ಅಥವಾ ಧರ್ಮಾಧಾರಿತ ಪ್ರಕರಣ ಇರಬಹುದು ಇಂತಹ ನೀಚತನದ ಸರ್ಕಾರ ಇರಬಾರದು. ತಕ್ಷಣ ಈ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸುವುದಾಗಿ ಹೇಳಿದರು.

ಧರ್ಮಾಧಾರಿತ ರಾಜಕಾರಣ ಒಂದು ಕಡೆ. ಆಂಧ್ರ ಸರ್ಕಾರ ಮುಸಲ್ಮಾನರಿಗೆ ಮೀಸಲಾತಿ ಮಾಡಿತ್ತು. ಆದರೆ ಧರ್ಮಾಧಾರಿತ ಮೀಸಲಾತಿ ಇಲ್ಲ ಎಂದು ಕೋರ್ಟ್ ನಲ್ಲಿ ಸ್ಟೇ ಇದೆ. ಕುತಂತ್ರ ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಇರಬಾರದು. ಇವುಗಳನ್ನು ಗಮನಿಸಿ ವಜಾ ರಾಜ್ಯ ಸರ್ಕಾರವನ್ನು ವಜಾ ಮಾಡುವ ಕಾರ್ಯವನ್ನು ರಾಜ್ಯಪಾಲರು ಮಾಡಬೇಕು ಎಂದು ಒತ್ತಾಯಿಸಿದರು. 

ದೇಶದ ಜನ ಕುರುಡಸ ಅಥವಾ ಖರ್ಗೆ ಅವರು ಕುರುದರೂ, ಡಿಕೆ ಶಿವಕುಮಾರ್ ಅವರು ತಲೆಕೆಟ್ಟವರೆ ನಾನು ಹಾಗೆ ಹೇಳ್ವಿಲ್ಲ ಎಂದು ಹೇಳುತ್ತಾರೆ. ವಿಧಾನ ಸೌಧದಲ್ಲಿಯೇ ಕುಡುಕರ ರೀತಿ ಮಾತನಾಡುತ್ತಾರೆ. ಬರುವ ದಿನದಲ್ಲಿ ಮುಸಲ್ಮಾನರಿಗೆ ಸಂತೃಪ್ತಿ ಪಡಿಸುವ ಸರ್ಕಾರದ ಕೆಲಸವನ್ನು ರಾಜ್ಯದ ಜನ ನೋಡಿದ್ದಾರೆ. 

ಪದಗಳ ಲಿಮಿಟ್ ಇರಬೇಕು ಇಲ್ವಾ.

ಮಹಾನಗರ ಪಾಲಿಕೆ ಚುನಾವಣೆ ಯಾಕೆ ನಡೆಸಲ್ಲ ನಾನು ನೋಡುತ್ತೇನೆ. ಚುನಾವಣಾ ಆಯುಕ್ತರಿಗೆ ಹೇಳುತ್ತಿದ್ದೇನೆ. ನಿಮ್ಮ ಮೇಲ್ ನಂಬಿಕೆ ಇದೆ ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ.  ಚುನಾವಣಾ ದಿನಾಂಕ ನಿಗದಿ ಮಾಡದಿದ್ದಲ್ಲಿ ರಾಷ್ಟ್ರ ಭಕ್ತ ಬಳಗದ ವತಿಯಿಂದ ಬೆಂಗಳೂರಿಗೆ ಹೋಗಲಾಗುವುದು. 

12 ಕೋಟಿ ಕೊಡುವ ಯೋಗ್ಯತೆ ಇಲ್ಲ

ಪತ್ರಿಕಾಗೋಷ್ಠಿಯಲ್ಲಿ ಈ ವಿಶ್ವಾಸ್, ಮೋಹನ್ ಜ್ಯಾದವ್, ಚನ್ನಬಸಪ್ಪ, ರಾಜು, ಶಿವು, ಬೇಳೂರು ಗೋವಿಂದಪ್ಪ, ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

city has become a garbage dump

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close