Suddilive || Shivamogga
ಹಿಂದುತ್ವ ಮತ್ತು ಬಿಎಸ್ ವೈ ವಿರುದ್ಧ ಮಾತನಾಡಿದವರನೆಲ್ಲಾ ಬಿಜೆಪಿ ಮುಗಿಸಿದೆ-ಬೇಳೂರು ಗಂಭೀರ ಆರೋಪ -BJP has finished off all those who spoke against Hindutva and BSY - Belur makes a serious allegation
ಯಾರ್ಯಾರು ಹಿಂದುತ್ವದ ಬಗ್ಗೆ ಮಾತನಾಡಿದ್ದಾರೆ ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ, ಪ್ರತಾಪ್ ಸಿಂಹನ ಮುಗ್ಸಿದ್ದಾರೆ ಈಗ ಯತ್ನಾಳ್ರನ್ನು ಮುಗ್ಸಿದ್ದಾರೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿ, ಯತ್ನಾಳ್ ಎಂಬ ಹಿಂದೂ ಹುಲಿಯನ್ನು ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ಬೋನಿನಲ್ಲಿ ಹಾಕಿದ್ದಾರೆ. ಯತ್ನಾಳ್ ಕಾಂಗ್ರೆಸ್ ಪಕ್ಷವನ್ನು ಹೆಚ್ಚುಬೈದಿದ್ದಾರೆ. ಹಾಗೆ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದಾರೆ. ಹೀಗೆ ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯ ಬಹತೇಕರನ್ನ ಬಿಜೆಪಿ ರಾಜಕೀಯವಾಗಿ ಮುಗಿಸಿದೆ. ಮುಂದೆ ಸಿಟಿ ರವಿಯನ್ನು ಕೂಡ ಮುಗಿಸಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪನವರು ಏನು ತಪ್ಪು ಮಾಡಿದ್ದರು ಟಿಕೆಟ್ ಕೇಳಿದೆ ತಪ್ಪಾ ಅವರದ್ದು? ಇಡೀ ಜಿಲ್ಲೆಯಲ್ಲಿ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದ ಈಶ್ವರಪ್ಪನವರನ್ನೇ ಹೊರಹಾಕಿದ ಮೇಲೆ ಯತ್ನಾಳ ರನ್ನ ಬಿಡುತ್ತಾರಾ ? ಎಂದು ಪ್ರಶ್ನಿಸಿದ್ದಾರೆ.
ಇದೇ ರೇಣುಕಾಚಾರ್ಯ ನಮ್ಮನ್ನೆಲ್ಲ ಹೈದರಾಬಾದ್ಗೆ ಕರೆದುಕೊಂಡು ಹೋದಾಗ ಅಪ್ಪ ಮಕ್ಕಳನ್ನು ಚಡ್ಡಿ ಬಿಚ್ಚುತ್ತೇನೆ ಎಂದಿದ್ದ. ಅಂದು ಅಷ್ಟೆಲ್ಲ ಯಡ್ಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದ ರೇಣುಕಾಚಾರ್ಯ ಇಂದು ಬಿಎಸ್‍ವೈ ಮಾನಸ ಪುತ್ರರಾಗಿದ್ದಾರೆ. ಯತ್ನಾಳ್ಗೆ ಪಂಚಮಸಾಲಿ ಸಮಾಜ ವಿದೆ ಅವರ ಪರವಾಗಿ ಹೋರಾಟ ಮಾಡುವುದಾಗಿ ಪಂಚಮಸಾಲಿ ಗುರುಗಳು ಹೇಳಿಕೆ ಕೊಟ್ಟಿದ್ದಾರೆ ಬಿಜೆಪಿ ಈ ರೀತಿ ಗೊಂದಲದ ಗೂಡಾಗಿದೆ ನಮಗೇನು ಅದು ಸಮಸ್ಯೆ ಅಲ್ಲ ಎಂದು ತಿಳಿಸಿದರು.
ನಾವು 18 ಶಾಸಕರನ್ನು ಅಮಾನತ್ತು ಮಾಡಿದ್ದಕ್ಕೆ ದೊಡ್ಡ ವಿಷಯ ಮಾಡಿದಿರಿ ಈಗ ಯತ್ನಾಳ್ರನ್ನು ಹೊರ ಹಾಕಿದ್ದಾರಲ್ಲ, ಯೋಗಿ ಆದಿತ್ಯನಾಥ ರಂತಹವರನ್ನು ಕೂಡ ಇವರು ತೆಗೆಯುತ್ತಾರೆ. ರಾಹುಲ್ ಗಾಂಧಿಯನ್ನು ಹೊಗಳಿದ್ದು ನೋಡಿದರೆ ಯೋಗಿ ಆದಿತ್ಯನಾಥ ರವರನ್ನು ಬಿಜೆಪಿ ಹೊರಹಾಕುವ ಸಾಧ್ಯತೆಯಿದೆ ಎಂದರು.
ಬಿವೈ ವಿಜಯೇಂದ್ರ ಗೆದ್ದಂತೆ ಅಲ್ಲ ಅವರಿಗೆ ಪವರ್ ಇದೆ ಯಡಿಯೂರಪ್ಪ ಮತ್ತು ಅವರ ಮಕ್ಕಳ ಬಳಿ 3.500 ಕೋಟಿ ಇದೆ ಎಂದು ಯತ್ನಾಳ್ ಹೇಳಿದ್ದಾರೆ ಹಡಬೆ ದುಡ್ಡು ಇದೆ ಎಂದಿದ್ದಾರೆ. ಯತ್ನಾಳ್ ರವರ ಎಂಎಲ್ಎ ಗಿರಿ ಹಾಗೆ ಇರುತ್ತದೆ. ಯತ್ನಾಳ್ ರವರು ಹಿಂದೂ ಕಟ್ಟಾಳು ಕಾಂಗ್ರೆಸ್ ಪಕ್ಷವನ್ನು ಬೈದಿದ್ದರಿಂದ ಕಾಂಗ್ರೆಸ್ಗೆ ಸೇರ್ಪಡೆ ವಿಷಯ ಸಾಧ್ಯವಿಲ್ಲ.
ಯಡ್ಯೂರಪ್ಪ ಮತ್ತು ಅವರ ಮಕ್ಕಳು ನನ್ನನ್ನು ಮುಗಿಸಲಿಕ್ಕೆ ಹೊರಟಿದ್ರು, ಯಾರನ್ನು ಮುಗಿಸಲು ಸಾಧ್ಯವಿಲ್ಲ ಒಂದಲ್ಲ ಒಂದು ದಿವಸ ಇವರು ಹೊರಗೆ ಹೋಗೆ ಹೋಗುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲೂ ಕೂಡ ಗೊಂದಲವಿದೆ. ಕಾಂಗ್ರೆಸ್ ಹೈಕಮಾಂಡ್ ನಮ್ಮಲ್ಲಿರೋ ಗೊಂದಲವನ್ನು ಹೋಗಲಾಡಿಸಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಮುಸ್ಲಿಮರಿಗೆ ಮೀಸಲಾತಿ ವಿಷಯದಲ್ಲಿ ಬಿಜೆಪಿ ಹೋರಾಟ ಸರಿಯಲ್ಲ. 35 ಲಕ್ಷ ಬಡ ಕುಟುಂಬಗಳಿಗೆ ಆಹಾರಕ್ಕೆ ಕೊಡುವುದಾಗಿ ಮೋದಿಜಿ ಅನೌನ್ಸ್ ಮಾಡಿದ್ದಾರಲ್ಲ. ಇದಕ್ಕೆ ಬಹಿಷ್ಕಾರ ಹಾಕತ್ತೀರಾ ಸ್ಟ್ರೈಕ್ ಮಾಡುತ್ತೀರಾ ನಾಚಿಕೆ ಆಗಬೇಕು ಬಿಜೆಪಿಗೆ. ಮುಸ್ಲಿಮರಿಗೆ ನಾವು ಕೊಟ್ಟಿರೋದಕ್ಕೆ ಕೇವಲ ಒಂದು ಪರ್ಸೆಂಟ್ ಮಾತ್ರ ಕೊಟ್ಟಿರೋದು. ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲಾ ಧರ್ಮದ ಮಕ್ಕಳು ಶಿಕ್ಷಣ ಪಡಬೇಕು ಎಂಬುದು ಮೋದಿಜಿ ಹೇಳಿದ್ದಾರಲ್ಲ ಇದು ಅವರಿಗೆ ಮರೆತು ಹೋಗಿದೆ ಎಂದರು.
ಪ್ರವೀಣ್ ಹತ್ಯೆ ಕೇಸು ಪರಮೇಶ್ ಮೇಸ್ತ್ರಿ ಕೇಸ್ ಎಂದು ಬಿಜೆಪಿ 63 ಕ್ಕೆ ಇಳಿದಿದೆ. ಯಾರ್ಯಾರು ಯಡಿಯೂರಪ್ಪನವರ ವಿರುದ್ಧ ಹೋಗುತ್ತಾರೆ ಅವರೆಲ್ಲರನ್ನು ಬಿಜೆಪಿ ಮುಗುಸ್ತಾ ಹೋಗ್ತಿದೆ. ಬಿಪಿ ಹರೀಶ್ ಹಿಂದೆ ರೇಣುಕಾಚಾರ್ಯರನ್ನು ಬಿಟ್ಟಿದ್ದಾರೆ. ಶಿವರಾಮ್ ಹೆಬ್ಬಾರ್ ಮತ್ತು ಎಸ್ ಟಿ ಸೋಮಶೇಖರ್ ಅವರಿಗೂ ಬಿಜೆಪಿ ನೋಟೀಸ್ ನೀಡಿದೆ. ಅವರು ಈ ನೋಟಿಸ್ ಗೆಲ್ಲ ಹೆದರಲ್ಲ ಎಂದರು.
ಹನಿ ಟ್ರ್ಯಾಪ್ ಬಗ್ಗೆ ಯಾರು ಕಂಪ್ಲೇಂಟ್ ಕೊಟ್ಟಿಲ್ಲ. ಈ ಬಗ್ಗೆ ಯಾರೂ ಕಂಪ್ಲೇಂಟ್ ಕೊಟ್ಟಿಲ್ಲ ಎಂದ ಮೇಲೆ ಸಿಬಿಐ ಕೊಡುವ ಪ್ರಶ್ನೆಯೇ ಇಲ್ಲ. ರಾಜಣ್ಣ ಸಧನದಲ್ಲಿ ಹೇಳಬಾರದಾಗಿತ್ತು ಅದು ಗೊಂದಲ ಮೂಡಿದೆ. ಫೋನ್ ಟ್ಯಾಪಿಂಗ್ ಹಿಂದೆ ಬಿಎಸ್ ವೈ ಅಧಿಕಾರದಲ್ಲಿದ್ದಾಗಲೂ ನಡೆದಿತ್ತು ಎಂದು ಅವರ ಪಕ್ಷದವರ ಹೇಳುತ್ತಾರೆ. ಈಗೆಲ್ಲಾ ಫೋನ್ ಟ್ಯಾಪಿಂಗ್ ಎಲ್ಲಾ ಸಾಧ್ಯವಿಲ್ಲ ಫೋನ್ ಟ್ಯಾಪಿಂಗ್ ಎಲ್ಲಾ ದೆಹಲಿ ಕೈಯಲ್ಲಿ ಇದೆ ಎಂದರು.
ಯತ್ನಾಳ್ ಪಂಚಮಸಾಲಿ ಮುಖಂಡನಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚು ಹೊಡೆತ ಬೀಳುತ್ತದೆ. ನಿರಾಣಿ, ಶ್ರೀರಾಮುಲು ಮೊದಲಾದವರು ಯತ್ನಾಳ್ ರಂತಹ ಹಿರಿಯ ನಾಯಕನ ಉಚ್ಚಾಟನೆಗಿಂತ ಮೊದಲು ಯೋಚನೆ ಮಾಡಬೇಕಿತ್ತು ಎಂದು ಹೇಳಿದರು.
Belur makes a serious allegation