Suddilive || Shivamogga
ಆಟೋ ನಿಲ್ದಾಣದ ಮೇಲ್ಛಾವಣಿಗೆ ಸೂಡ ಅಧ್ಯಕ್ಷರಿಗೆ ಮನವಿ-Appeal to Suda President for auto stand roof
ಹಾಳಾಗಿರುವ ಆಟೋ ನಿಲ್ದಾಣಗಳಿಗೆ ಮತ್ತು ಮೇಲ್ಛಾವಣಿಯೇ ಕಾಣದ ನಿಲ್ದಾಣಗಳಲ್ಲಿ ಮೇಲ್ಛಾವಣಿ ಹಾಕಿಸಿಕೊಡುವಂತೆ ಇಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಇಂದು ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದಲ್ಲಿರುವ ಆಟೋ ನಿಲ್ದಾಣಗಳಿಗೆ ಕೆಲ ಮೇಲಾವಣೆಗಳು ಹಾಳಾಗಿದ್ದು, ಇನ್ನು ಕೆಲವು ಆಟೋ ನಿಲ್ದಾಣಗಳಿಗೆ ಮೇಲ್ಬಾವಣೆ ಇರುವುದಿಲ್ಲ. ಇದರಿಂದ ಮಳೆಗಾಲದಲ್ಲಿ ಮತ್ತು ಬೇಸಿಗೆಗಾಲದಲ್ಲಿ ಆಟೋಗಳನ್ನು ನಿಲ್ದಾಣದಲ್ಲಿ ನಿಲ್ಲಿಸಲು ಆಗದೇ ಆಟೋ ಚಾಲಕರಿಗೆ ತುಂಬಾ ತೊಂದರೆ ಆಗುತ್ತಿದೆ. ಬೇಸಿಗೆ ಗಾಲದಲ್ಲಿ ತುಂಬಾ ಬಿಸಿಲು ಇರುವುದರಿಂದ ಆಟೋಗಳನ್ನು ನಿಲ್ಲಿಸಲು ಮತ್ತು ಆಟೋಚಾಲಕರಿಗೆ ಕೂರಲು ತುಂಬಾ ತೊಂದರೆ ಆಗುತ್ತದೆ.
ಆದ್ದರಿಂದ ತಾವುಗಳು ದಯಮಾಡಿ ಸರ್ಕಾರದ ಅನುದಾನದಲ್ಲಿ ಶಿವಮೊಗ್ಗ ನಗರದ ಎಲ್ಲಾ ಆಟೋ ನಿಲ್ದಾಣಗಳಿಗೆ ಮೇಲ್ಪಾವಣೆ ನಿರ್ಮಿಸಿಕೊಡಲು ಸಂಘಟನೆ ರಾಜ್ಯಾಧ್ಯಕ್ಷ ದೇವು (ಸತೀಶ್) ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
auto stand roof