ಶಿವಮೊಗ್ಗದ ಆಜಾನ್ ಟೂರ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದ ರಿಜ್ವಾನ್ ವಿರುದ್ಧ ಅಪಹರಣದ ಆರೋಪ-ಬಂಧನ-arrested on kidnapping charges

Suddilive || Bangalore

ಶಿವಮೊಗ್ಗದ ಆಜಾನ್ ಟೂರ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದ ರಿಜ್ವಾನ್ ವಿರುದ್ಧ ಅಪಹರಣದ ಆರೋಪ-ಬಂಧನ-Rizwan, who ran Aazan Tour and Travels in Shivamogga, arrested on kidnapping charges

Kidnapping, arrested


ಶಿವಮೊಗ್ಗದ ಆಜಾನ್ ಟೂರ್ ಅಂಡ್ ಟ್ರಾವೆಲ್ಸ್ ನ್ನ ನಡೆಸುತ್ತಿದ್ದ ರಿಜ್ವಾನ್ ಮತ್ತು ಇರ್ಫಾನ್ ಹಾಗೂ ಇತರರ ವಿರುದ್ಧ ಅಪಹರಣದ ಪ್ರಕರಣ ದಾಖಲಾಗಿದ್ದು ಇಬ್ವರನ್ನೂ ಪೊಲೀಸರು ಬಂಧಿಸಿರುವುದಾಗಿ ಕೇಳಿ ಬಂದಿದೆ. 

ಇಂದಿಗೆ ಸರಿಯಾಗಿ ಮೂರು ತಿಂಗಳ ಹಿಂದೆ ಅಂದರೆ ಡಿಸೆಂಬರ್ 2024 ರಲ್ಲಿ ಅಪಹರಣ ಮಾಡಿರುವ ಆರೋಪವನ್ನ ಎದುರಿಸುತ್ತಿದ್ದ ವ್ಯಕ್ತಿ ಹಜ್ ಟೂರ್ ನ ವಿಷಯದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಅಯೂಬ್ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು. 

ಇದಾದ ನಂತರ ಈಗ ದೂರುದಾರರೇ ಆರೋಪಿತನನ್ನ ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ರಿಜ್ವಾನ್, ಇರ್ಫಾನ್ ಹಾಗೂ ಇತರರ ವಿರುದ್ದ ಅಪಹರಣಕ್ಕೊಳಗಾದ ಅಯೂಬ್ ಅವರ ಪತ್ನಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಇಬ್ಬರನ್ನ ಪೊಲೀಸರು ಬಂದಿಸಿದ್ದಾರೆ. 

ಈ ಪ್ರಕರಣದಲ್ಲಿ  ಇಕ್ಬಾಲ್ ಮತ್ತು ಅಯೂಬ್ ಜಾಮೀನು ಪಡೆದಿದ್ದರು.ಇದಾದರೂ ಸಹ, ರಿಜ್ವಾನ್ ತಕ್ಷಣವೇ ಹಣ ಪಾವತಿಸುವಂತೆ ಒತ್ತಡ ತರುತ್ತಿದ್ದು, ಅಪಹರಣದ ಕೆಲಸಕ್ಕೆ ಕೈಹಾಕಿರುವಂತೆ ಕಂಡು ಬಂದಿದೆ. 

ಶಿವಮೊಗ್ಗದಲ್ಲಿ "ಅಜಾನ್ ಉಮ್ರಾ ಟ್ರಾವೆಲ್ಸ್" ಎಂಬ ಸಂಸ್ಥೆ ನಡೆಸುತ್ತಿದ್ದ ಮೊಹಮ್ಮದ್ ರಿಜ್ವಾನ್ ಈ ಅಪಹರಣದ ಮುಖ್ಯ ಆರೋಪಿಯಾಗಿದ್ದಾರೆ. ಶಿರಾಳಕೊಪ್ಪದ ನಿವಾಸಿ ಅಯೂಬ್ ಅವರನ್ನು ಬೆಂಗಳೂರಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಇರ್ಫಾನ್ ಮತ್ತು ಇತರರ ಜೊತೆ ಸೇರಿ ಅಪಹರಿಸಿದ್ದನು. ನಂತರ, ಪೊಲೀಸರು ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಆರೋಪಿಗಳಾದ ರಿಜ್ವಾನ್ ಮತ್ತು ಅವರ ಮೂವರು ಸಹಚರರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕೆಆರ್ ಪುರಂ ನಲ್ಲಿರುವ ಸಹೋದನ ಮನೆಗೆ ಬಂದಿದ್ದ ಅಯೂಬ್ ಕಳೆದ ಎರಡು ವಾರದಿಂದ ಅಲ್ಲೇ ವಾಸವಾಗಿದ್ದರು. ಮಾ.24 ರಂದು ಮನೆಯ ಹತ್ತಿರುವ ಇರುವ ಕೆ.ಪಿ.ಎನ್ ಫ್ರೆಶ್ ತರಕಾರಿ ಶಾಪ್ ಗೆ ಹೋಗಿ ತರಕಾರಿ ಖರೀದಿಸಿ ಮನೆಗೆ ಬರುವಾಗ ಅವರನ್ನ ಅಪಹರಿಸಲಾಗಿದೆ ಎಂದು ಅಯೂಬ್ ಪತ್ನಿ ದೂರು ದಾಖಲಿಸಿದ್ದರು. 

ಅಲ್ಲಿನ ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದ ಪೊಲೀಸರಿಗೆ ಅಯೂಬ್ ರನ್ನ‌ ಕಾರೊಂದರಲ್ಲಿ ಅಪಹರಸಿರುವ ದೃಶ್ಯಸಹ ಲಭ್ಯವಾಗಿದೆ. ಅದರ ಆಧಾರದ ಮೇರೆಗೆ ದೂರು ದಾಖಲಾಗಿ ಇರ್ಫಾನ್ ಮತ್ತು ರಿಜ್ವಾನ್ ನನ್ನ ಬಂಧಿಸಲಾಗಿದೆ. 

arrested on kidnapping charges

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close