ಮನೆ ಖರೀದಿಸಲು ಹೋದ ಇಂಜಿನಿಯರ್-ಹಣಕಿತ್ತುಕೊಂಡು ಪರಾರಿಯಾದ ಮಹಿಳೆ- Woman flees after stealing money

 suddilive || shivamogga

ಮನೆ ಖರೀದಿಸಲು ಹೋದ ಇಂಜಿನಿಯರ್-ಹಣಕಿತ್ತುಕೊಂಡು ಪರಾರಿಯಾದ ಮಹಿಳೆ-Woman flees after stealing money from engineer who went to buy a house

Flees, money

ಮನೆ ಖರೀದಿಸಲು ಹೋದ ಇಂಜಿನಿಯರ್ ಗೆ ದೋಖಾ ಆಗಿದೆ. ಮಹಿಳೆ ಮತ್ತು ಇತರೆ ಇಬ್ಬರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. 

27 ವರ್ಷದ ಇಂಜಿನಿಯರ್ ಒಬ್ಬರು,  ಒಂದು ತಿಂಗಳ ಹಿಂದೆ ಶಿವಮೊಗ್ಗ ನಗರದ ವಿದ್ಯಾನಗರದ ವಾಸಿಯಾದ ಮಂಜುಳಮ್ಮ ರವರಿಂದ ಆರ್.ಸಿ.ಸಿ ಮನೆಯ ಖರೀದಿ ಮಾಡಲು ಮುಂದಾಗಿದ್ದು, 75,50,000/- ಗೆ ಸ್ನೇಹಿತರು, ಸಂಬಂಧಿಕರು ಹಾಗೂ ಬ್ರೋಕರ್ ನ ಸಮ್ಮುಖದಲ್ಲಿ ಮಾತುಕತೆ ಮುಗಿಸಿದ್ದರು. 

ಮಾತುಕತೆಯಂತೆ  ಒಟ್ಟು ,10 ಲಕ್ಷ ರೂಗಳನ್ನ ಇಂಜಿನಿಯರ್ ನೀಡಿದ್ದರು.  ಉಳಿದ 35,50,000/- ಹಣವನ್ನು ರಿಜಿಸ್ಟರ್ ಸಮಯದಲ್ಲಿ ಕೊಡುವುದಾಗಿ ಮಾತುಕತೆ ಮಾಡಲಾಗಿತ್ತು. ಮೊನ್ನೆ ಮಾ.24 ರಂದು  ಮಂಜುಳಮ್ಮ ರವರು ಉಳಿದ 35,50,000/- ಹಣವನ್ನು ಕ್ಯಾಶ್ ತೆಗೆದುಕೊಂಡು ಸಬ್ ರಿಜಿಸ್ಟರ್ ಆಫೀಸ್ ಗೆ ಬರುವಂತೆ ತಿಳಿಸಿದ್ದು, ಇಂಜಿನಿಯರ್ ಸಹ ಮಂಜಮ್ಮನವರ ನಿರ್ದೇಶನದಂತೆ ಸಬ್ ರಿಜಿಸ್ಟರ್ ಕಚೇರಿಗೆ ಬಂದಿದ್ದರು.  ಮಹಿಳೆ ಮಂಜಮ್ಮ ಇಬ್ವರು ಮೂವರ ಜೊತೆ ಎಕ್ಸ ಯು ವಿ ವಾಹನದಲ್ಲಿ ಬಂದವರೆ ರಿಜಿಸ್ಟ್ರೇಷನ್ ಮುಗಿಸದೆ,  35,50,000/- ಹಣದ ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ಇಂಜಿನಿಯರ್ ದೂರು ನೀಡಿದ್ದಾರೆ. 

35,50,000/- ರೂ ಹಣವುಳ್ಳ, ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾದ ಮಂಜುಳಮ್ಮ ಹಾಗೂ ಇತರೆ 2-3 ಜನರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ತನ್ನ ಹಣವನ್ನು ವಾಪಾಸು ಕೊಡಿಸುವಂತೆ ಇಂಜಿನಿಯರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

Woman flees after stealing money

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close