ಮಲಗಿದ್ದ ವ್ಯಕ್ತಿಯ ಮೇಲೆ ಗೋಡೆ ಕುಸಿತ-ರಕ್ಷಣೆ-Wall collapses on sleeping person

 Suddilive || ಭದ್ರಾವತಿ

 ಮಲಗಿದ್ದ ವ್ಯಕ್ತಿಯ ಮೇಲೆ ಗೋಡೆ ಕುಸಿತ-ರಕ್ಷಣೆ-Wall collapses on sleeping person - rescue

Wall, collapses

ಇಲ್ಲಿನ ಪಾಳು ಬಿದ್ದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಗೋಡೆ ಕುಸಿದ ಪರಿಣಾಮ ವ್ಯಕ್ತಿ ಗಂಭೀರ ಗಾಯಗಳಾಗಿದ್ದು ಆತನನ್ನ ಭದ್ರಾವತಿಯ ಅಗ್ನಿಶಾಮಕ ದಳದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಕಾಗದ ನಗರದ 7 ನೇ ತಿರುವಿನಲ್ಲಿ ಆನಂದ ಸ್ವಾಮಿ ಎಂಬ 38 ವರ್ಷದ ವ್ಯಕ್ತಿಯು ಪಾಳಬಿದ್ದ ಮನೆಯಲ್ಲಿ ವಿಶಾಂತಿ ಪಡೆಯುವ ವೇಳೆ ಪಾಳುಬಿದ್ದ ಮನೆಯ ಗೋಡೆಯೊಂದು ಕುಸಿದು ಆನಂದ ಸ್ವಾಮಿ ಅವರ ಮೈಮೇಲೆ ಗೋಡೆ ಕುಸಿದಿದೆ. ಮೊದಲೆ ಪಾಳುಬಿದ್ದ ಮನೆಯಾಗಿದ್ದರಿಂದ ದುಸ್ಥಿತಿಯಲ್ಲಿದ್ದ ಗೋಡೆ ಕುಸಿದು ಬಿದ್ದಿದೆ. 

ಸ್ಥಳೀಯರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಗಾಯಾಳು ಆನಂದ ಸ್ವಾಮಿಯನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ರವಾನಿಸಲಾಗಿದೆ. 

ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಸಹಾಯಕ ಅಧಿಕಾರಿ ಹುಲಿಯಪ್ಪ ಸಿಹೆಚ್, ಸಿಬ್ವಂದಿಗಳಾದ ಬಾಬು, ಮಂಜುನಾಥ್, ಸುರೇಶ್, ಶ್ರೀನಿವಾಸ್ ಹರೀಶ್, ಮಹೇಂದ್ರ, ರಾಜಾನಾಯ್ಕ್, ವೀರೇಶ್, ಬಬಲು, ಸಿದ್ದಪ್ಪ ಭಾಗಿಯಾಗಿದ್ದರು. ಈ ಘಟನೆ ಸಂಜೆ ಸುಮಾರು 5-15 ಕ್ಕೆ ಸಂಭವಿಸಿದೆ.

Wall collapses on sleeping person

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close