Suddilive || Shivamogga
ಕೈಸುಡುತ್ತಿದೆ ಯುಗಾದಿ ಹಬ್ಬ-Ugadi festival is approaching
ನಾಳೆ ಯಿಂದ ವಿಶ್ವಮಸು ಸಂವತ್ಸರ ಆರಂಭವಾಗಲಿದೆ. ಯುಗಾದಿ ಹಬ್ವದಿಂದ ಹೊಸ ಸಂವತ್ಸರ ಆರಂಭವಾಗಲಿದ್ದು, ಹಬ್ಬಕ್ಕೆ ಖರೀದಿ ಜೋರಾಗಿದೆ.
ಆದರೆ ಖರೀದಿಗೆ ಗ್ರಾಹಕರಿಗೆ ಕೈಸುಡುವಂತೆ ಮಾಡಿದೆ. ಈಗಾಗಲೇ ಹಾಲಿನದರವನ್ನ ಏರಿಸಲಾಗಿದೆ. ಯುಗಾದಿಗೆ ಬೇಕಾದ ಬೇವು ಸಹ ಬೀದಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಒಂದು ಕಟ್ಟಿಗೆ 30 ರೂ. ನಿಗದಿಪಡಿಸಲಾಗಿದೆ. ಮಾವಿನ ಸೊಪ್ಪೊಂದೇ ಕಟ್ಟಿಗೆ 10 ರೂಗೆ ಸಸ್ಥವಾಗಿ ಮಾರಾಟ ಮಾಡಲಾಗುತ್ತಿದೆ.
ಅದರಂತೆ ಹಣ್ಣುಗಳು ದುಬಾರಿಯಾಗಿದೆ. ಹೂವುಗಳು ದುಬಾರಿಯಾಗಿದೆ. ಮಾಮೂಲಿ ದಿನಗಳಲ್ಲಿ 70-80 ರೂ.ಗಳಿಗೆ ದೊರಕುತ್ತಿದ್ದ ಸೇವಂತಿಗೆ ಹೂವು ಇಂದು 250 ರೂ.ಗೆ ಮಾರಾಟವಾಗುತ್ತಿದೆ. ಕೆ.ಜಿಗೆ 40-50 ರೂ. ರಜ್ ನಲ್ಲಿದ್ದ ಗುಲಾಬಿ ಹೂವುಗಳು 250 ರೂ ದರಗಳಿಗೆ ಮಾರಾಟವಾಗುತ್ತಿದೆ.
ಸುಗಂಧರಾಜ ಮಾಮೂಲಿ ದಿನಗಳಲ್ಲಿ 40-50 ರೂ.ಗಳಿಗೆ ಮಾರಾಟವಾಗುತ್ತಿದ್ದು ಇಂದು ಕೆ.ಜಿಗೆ 300 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. 500-600 ರಲ್ಲಿ ಮಾರಾಟವಾಗುತ್ತಿದ್ದ ದುಂಡು ಮಲ್ಲಿಗೆ 2000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. 200-300 ರೂ.ಗೆ ಮಾರಾಟ ಮಾಡಲಾಗುತ್ತಿದ್ದ ಕಾಕಡ ಹೂವು 600 ರೂ.ಗೆ ಮಾರಾಟವಾಗುತ್ತಿದೆ.
400-500 ರೂಗಳಿಗೆ ಮಾರಾಟವಾಗುತ್ತಿದ್ದ ಸೂಜಿ ಮಲ್ಲಿಗೆ ಕೆಜಿಗೆ 1400 ರೂ.ಗೆ, ಕನಕಾಂಬರ 2000 ರೂಗೆ, 20-30 ರೂ.ಗಳಿಗೆ ಮಾರಾಟವಾಗುತ್ತಿದ್ದ ಚೆಂಡು ಹೂವು 40 ರಿಂದ 50 ರೂ.ಗೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಯುಗಾದಿ ಹಬ್ಬ ಜನರ ಕೈ ಸುಡುವಂತಾಗಿದೆ.
Ugadi festival is approaching