Suddilive || Shivamogga
ಆರ್ ಎಸ್ ಎಸ್ ನಿಂದ ಯುಗಾದಿ ಉತ್ಸವ- Ugadi festival from RSS
ಕೇಶವ ಬಲಿರಾಮ್ ಹೆಡ್ಗೇವಾರ್ ಅವರ 136 ನೇ ಹುಟ್ಟುಹಬ್ಬ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಉತ್ಸವ ನಡೆದಿದೆ. ಆರ್ ಎಸ್ ಎಸ್ ನ ಪ್ರಮುಖರೆಲ್ಲಾ ಈ ಯುಗಾದಿ ಉತ್ಸವದಲ್ಲಿ ಭಾಗಿಯಗಿ ಹಬ್ಬಕ್ಕೆ ಮೆರಗು ನೀಡಿದ್ದಾರೆ.
ಬೆಳಿಗ್ಗೆ ಫ್ರೀಡಂ ಪಾರ್ಕ್ ನಲ್ಲಿ ಆರ್ ಎಸ್ ಎಸ್ ನ 39 ಶಾಖೆಗಳಿಂದ ಸುಮಾರು 600 ಜನ ಶಾರೀರಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಖಿಲ ಭಾರತೀಯ ಶಿಕ್ಷಣ ಮಂಡಳಿಯ ಪ್ರಮುಖರಾದ ಶಂಕರಾನಂದರಿಂದ ಬೌಧಿಕ್ ನಡೆಸಲಾಯಿತು. ಡಾ.ಪ್ರವೀಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘ ಚಾಲಕರಾದ ರಂಗನಾಥ್, ಲೋಕೇಶ್ ಕರ್ಕಾಳೆ, ಕಾರ್ಯಕ್ರಮಕ್ಕೂ ಮುನ್ನ ಘೋಷ್ ವಾದನ ನುಡಿಸಲಾಯಿತು. ಅಖಿಲ ಭಾರತೀಯ ಸಹ ಶಾರೀರಕ ಪ್ರಮುಖ್ ಓ.ಕೆ.ಮೋಹನ್ ಉಪಸ್ಥಿತರಿದ್ದರು.
Ugadi festival from RSS