ಏ.25 ಕ್ಕೆ ಉದಯ ಸೂರ್ಯ ಸಿನಿಮಾ ಬಿಡುಗಡೆ-Udaya Surya movie to release on April 25

 Suddilive || Shivamogga

ಏ.25 ಕ್ಕೆ ಉದಯ ಸೂರ್ಯ ಸಿನಿಮಾ ಬಿಡುಗಡೆ-Udaya Surya movie to release on April 25

Uday, surya

ಏ.25 ರಂದು ರಾಜ್ಯಾದ್ಯಂತ ಉದಯ ಸೂರ್ಯ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇಂದು ಆನ್ವೇರಿಯ ಶ್ರೀದೇವಿ ಚಲನಚಿತ್ರ ಮಂದಿರದಲ್ಲಿ ಸಿನಿಮಾ ಟ್ರಯಲ್ ಬಿಸುಗಡೆಯಾಗಿದೆ. 

ಸಿನಿಮಾ ಟ್ರಯಲ್ ಮುಗಿದ ನಂತರ ಮಾತನಾಡಿದ ನಟ ಮತ್ತು ನಿರ್ದೇಶಕ ಎಸ್ ಎಸ್ ಪ್ರಕಾಶ್ ರಾಜ್, ಇದು ನನ್ನ ಎರಡನೇ ಸಿನಿಮಾವಾಗಿದ್ದು, ಸಿನಿಮಾದ ಎರಡನೇ ನಾಯಕನಾಗಿದ್ದೇನೆ. ಜಯರಾಜ್ ಮೊದಲ ನಾಯಕ, ಕಷ್ಟಪಟ್ಟು ಸಿನಿಮಾ ಮಾಡಲಾಗಿದೆ ಹೆಚ್ ಡಿ ಎಫ್ ಸಿಯಲ್ಲಿ ಕೆಲಸ ಮಾಡಿಕೊಂಡಿದ್ದೆ, ಕೊರೋನ ನಂತರ ಸಿನಿಮಾರಂಗಕ್ಕೆ ಬಂದು ನಿರ್ದೇಶನ ತರಬೇತಿ ಪಡೆದು ಸಿನಿಮಾ ನಿರ್ದೇಶಿಸಿದೆ ಎಂದರು. 

ಎಂಬಿಎ ಪದವಿಪಡೆದು,  ಸಿನಿಮಾ ಮಾಡಲು ಬಂದಾಗ ನನ್ನ ಸ್ನೇಹ ಬಳಗ ನೆಗೆಟಿವ್ ಹೇಳಲಿಲ್ಲ. ಕಮರ್ಷಿಯಲ್ ಆಕ್ಚನ್ ತ್ರಿಲ್ಲರ್ ಮೂವಿಯಾದ ಉದಯ ಸೂರ್ಯ ಸಿನಿಮಾವನ್ನ ನೈಜ ಘಟನೆಗಳ ಆಧಾರದ ಮೇಲೆ  ಸಿನಿಮಾ ಮಾಡಲಾಗಿದೆ ಎಂದರು.

ಫ್ಯಾಮಿಲಿ ಸೇಡು, ಪ್ರೀತಿ ಇದೆ 9 ಹಾಡಿದೆ 5 ಫೈಟ್ ಇದೆ. ಉದಯ ಸೂರ್ಯ ಸಿನಿಮಾ ಕಾಮಿಡಿ, ಆಕ್ಷನ್ ಥ್ರಿಲ್ಲರ್ ಮೂವಿಯಾಗಿದ್ದು, ಮತ್ತೊಂದು ಸಿನಿಮಾ ಮಾಡಲು ತಯಾರಾಗಿದ್ದೇವೆ ಎಂದರು.

ಡಿಸ್ಟ್ರಿಬ್ಯೂಟರ್ ವೆಂಕಟಗೌಡರು ಮಾತನಾಡಿ, ಸ್ಥಳೀಯವಾಗಿ ಸಿನಿಮಾ ಮಾಡಲಾಹಿದೆ. ಸಿನಿಮಾವನ್ನ ಚಲನಚಿತ್ರ ಮಂದಿರದ ಮಾಲೀಕರು ಇಷ್ಟಪಡಬೇಕು. ಸಿನಿಮಾವನ್ನ ಚಲನ ಚಿತ್ರ ಮಂದಿರದ ಮಾಲೀಜರು ಇಷ್ಟಪಟ್ಟಿದ್ದಾರೆ. ಏ.25 ರಂದು 40-50 ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು. 

ಪ್ರಡ್ಯೂಸರ್ ಮಂಜುನಾಥ್ ಎಸ್.ಪಿ  ಸಂಗೀತ ನಿರ್ದೇಶಕ ಯಶ್ವಂತ್ ಭೂಪತಿ, ಪೋಷಕ ನಟ ಶಿವಮೊಗ್ಗ ರಾಮಣ್ಣ  ನಾಯಕ ನಟಿ ತ್ರಿವೇಣಿ ಆಪಲ್ ಕಟ್ ಸಿನಿಮಾದ ನಟ ಸೂರ್ಯ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Udaya Surya movie to release on April 25

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close