Suddilive || Shivamogga
ಅಂಚೆ ಇಲಾಖೆಯ ಕಟ್ಟಡದ ಮೇಲೆ ಬಿದ್ದ ಮರ -Tree falls on postal department building
ಬೇಸಿಗೆಯ ಮಳೆ ಇನ್ನೇನು ಶಿವಮೊಗ್ಗದಲ್ಲಿ ಬೀಳುತ್ತೆ ಎಂಬ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿದಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಇತರೆಡೆ ಗಾಳಿ ಸಮೇತ ಮಳೆಯಾಗಿದೆ.
ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ವರುಣನ ಸಿಂಚನವಾಗಿದೆ. ಮಳೆ ಗಾಳಿಗೆ ಮರಗಳು ಧರೆಗುರುಳಿದೆ. ಹೊಸನಗರ ಪಟ್ಟಣದ ಕಟ್ಟಡಗಳ ಮೇಲೆ ಮರಗಳು ಉರುಳಿ ಬಿದ್ದ ದೃಶ್ಯಗಳು ಲಭ್ಯವಾಗಿದೆ.
ಹೊಸನಗರ ಪಟ್ಟಣದ ಸರ್ಕಾರಿ ಕಾಲೇಜು ಅಂಚೆ ಇಲಾಖೆ ಕಟ್ಟಡದ ಮೇಲೆ ಮರ ಬಿದ್ದಿದೆ. ಪಟ್ಟಣ ಮಧ್ಯಭಾಗದ ನೆಹರು ಮೈದಾನದ ಬಳಿಯಿದ್ದ ಮರವೊಂದು ಕಟ್ಟಡದ ಮೇಲೆ ಉರುಳಿ ಬಿದ್ದಿದೆ. ಮರ ಉರುಳಿ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಗಾಳಿ ಸಹಿತ ಗುಡುಗು ಸಿಡಿಲಿಂದ ಬಿದ್ದ ಮಳೆಸುಮಾರು ಅರ್ಧ ತಾಸು ಸುರಿದ ಮಳೆಯಿಂದಾಗಿ ತಂಪೆರೆದಿದೆಯಾದರೂ ಅಲ್ಲಲ್ಲಿ ಮರಗಳು ಧರೆಗುರುಳುವ ದೃಶ್ಯ ಲಭ್ಯವಾಗಿದೆ.
Tree falls on postal department building