18 ಪಂದ್ಯಾವಳಿಗಳು, 16 ತಂಡ ಭಾಗಿ, ಮೂರುದಿನಗಳ ಕ್ರಿಕೆಟ್ ಮ್ಯಾಚ್-ಮೊದಲನೇ ಬಹುಮಾನ ಮಂಡಗದ್ದೆ ತಂಡ, ತೃತೀಯ ಬಹುಮಾನ ಬಸವೇಶ್ವರ ಕ್ರಿಕೆಟರ್ಸ್-three-days cricket match

 Suddilive || Shivamogga

18 ಪಂದ್ಯಾವಳಿಗಳು, 16 ತಂಡ ಭಾಗಿ, ಮೂರುದಿನಗಳ ಕ್ರಿಕೆಟ್ ಮ್ಯಾಚ್-ಮೊದಲನೇ ಬಹುಮಾನ ಮಂಡಗದ್ದೆ ತಂಡ, ತೃತೀಯ ಬಹುಮಾನ ಬಸವೇಶ್ವರ ಕ್ರಿಕೆಟರ್ಸ್-18 tournaments, 16 teams participated, three-days cricket match - first prize Mandagadde team, third prize Basaveshwara Cricketers


Cricket, match

ತಾಲೂಕಿನ ಪುರುದಾಳುವಿನಲ್ಲಿ ಮೂರು ದಿನಗಳ ಕಾಲ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ನ ಪಂದ್ಯಾವಳಿಯು ಇಂದು ಮುಕ್ತಾಯಗೊಂಡಿದ್ದು ಮಂಡಗದ್ದೆಯ ತಂಡ ಭರ್ಜರಿಯಾಗಿ ಗೆಲ್ಲುವ ಮೂಲಕ ಬಸವೇಶ್ವರ ಕ್ರಿಕಟೇರ್ಸ್ 8 ನೇ ವರ್ಷದ ಗ್ರಾಮಾಂತರ ಟೆನ್ನಿಸ್ ಬಾಲ್  ಲೀಗ್ ಮಾದರಿಯ ಪಂದ್ಯಾವಳಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 

ಮೂರು ದಿನಗಳ ಕಾಲ ಪುರುದಾಳುವಿನಲ್ಲಿ 12 ಲೀಗ್ ಪಂದ್ಯಗಳು, ನಾಕ್ ಔಟ್ 4, 2 ಸೆಮಿಫೈನಲ್, ತೃತೀಯ ಸ್ಥಾನಕ್ಕಾಗಿ ನಡೆದ ಪ್ರತ್ಯೇಕ ಪಂದ್ಯಾವಳಿ ಸೇರಿ ಒಟ್ಟು 18 ಪಂದ್ಯಾವಳಿಗಳು ನಡೆದಿದೆ. 


ಫೈನಲ್ ನಲ್ಲಿ ಮಂಡಗದ್ದೆ ಕ್ರಿಕೆಟ್ ತಂಡ ಮತ್ತು ಪಿಆರ್ ಕೆ ಮಚಲಿ ತಂಡದ ನಡುವೆ ಮುಖಾಮುಖಿ ನಡೆದಿದ್ದು 4 ಓವರ್ ಗೆ ಮಂಡಗದ್ದೆ 58 ರನ್ ಗಳಿಸಿ ಓವರ್ ಮುಕ್ತಾಯಗೊಳಿಸಿತ್ತು. ಪಿಆರ್ ಕೆ ತಂಡ ಓವರ್ ಮುಕ್ತಾಯಕ್ಕೆ 38 ರನ್ ಗಳಿಸಿ ಮಂಡಗದ್ದೆ ತಂಡದ ವಿರುದ್ಧ ಸೋತಿತ್ತು. ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯಾವಳಿಯನ್ನ ಅತಿಥೇಯ ಬಸವೇಶ್ವರ ಕ್ರಿಕೇಟರ್ಸ್ ಪುರುದಾಳು ತಂಡ ಉಳಿಸಿಕೊಂಡು ಬಹುಮಾನ ಗೆದ್ದುಕೊಂಡಿದೆ. 

ಪ್ರಥಮ ಬಹುಮಾನವಾಗಿ ಮಂಡಗದ್ದೆ ತಂಡಕ್ಕೆ 30 ಸಾವಿರ ಬಹುಮಾನ, ದ್ವಿತೀಯ ಬಹುಮಾನವನ್ನ ಗೆದ್ದುಕೊಂಡ ಪಿಆರ್ ಕೆ ಮಚಲಿ ತಂಡಕ್ಕೆ 15 ಸಾವಿರ ಬಹುಮಾನ, ತೃತೀಯ ಬಹುಮಾನವನ್ನ ಉಳಿಸಿಕೊಂಡ ಪುರುದಾಳುವಿನ ಬಸವೇಶ್ವರ ಕ್ರಿಕೆಟರ್ಸ್ ತಂಡ   7½ ಸಾವಿರವನ್ನ ಗೆದ್ದುಕೊಂಡಿದೆ. ನಾಲ್ಕನೇ ಸ್ಥಾನವನ್ನ  ಹಣಗೆರೆಕಟ್ಟೆ ತಂಡ ಗೆದ್ದುಕೊಂಡಿದೆ. 

ಬಸವೇಶ್ವರ ಕ್ರಿಕಟೇರ್ಸ್ 8 ನೇ ವರ್ಷದ ಗ್ರಾಮಾಂತರ ಟೆನ್ನಿಸ್ ಬಾಲ್  ಲೀಗ್ ಮಾದರಿಯ ಪಂದ್ಯಾವಳಿ ಪುರುದಾಳು ಹುರಳಿ ಕ್ರೀಡಾಂಗಣದಲ್ಲಿ ನಡೆದಿತ್ತು. ಮೂರುದಿನಗಳ ನಡೆದ ಪಂದ್ಯಾವಳಿಗಳು ಕ್ರಿಕೆಟ್ ಪ್ರಿಯರಿಗೆ ಹಬ್ಬದ ರಸದೌತಣವನ್ನೇ ಉಣಬಡಿಸಿದವು.

three-days cricket match

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close