MrJazsohanisharma

ಚಾಕು ತೋರಿಸಿ ಧಮ್ಕಿ-Threatened with a knife

 Suddilive || Shivamogga

ಚಾಕು ತೋರಿಸಿ ಧಮ್ಕಿ-Threatened with a knife

Threatened, knife

ಶಿವಮೊಗ್ಗದಲ್ಲಿ ವಾಹನ ಚಲಿಸುವಾಗ ಕಿರಿಕ್ ಆಗಿದೆ. ಕಾರನ್ನ ಚಲಿಸಿಕೊಂಡು ಬರುತ್ತಿದ್ದ ವ್ಯಕ್ತಿಗೆ ಏಕಾಏಕಿ ಅಡ್ಡಹಾಕಿದ ಆಟೋದವನು ಶಿವಮೊಗ್ಗದಲ್ಲಿ ಹೇಗೆ ಓಡಾಡುತ್ತೀಯ  ಎಂದು ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆನಿನ್ನೆ ಮಧ್ಯಾಹ್ನ ನಡೆದಿದೆ. 

ಬಾಡಿಗೆ ಟ್ಯಾಕ್ಸಿ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶಿವಕುಮಾರ್ ಎಂಬ ಯುವಕ ನಿನ್ನೆ  ಕೆಎ 27ಸಿ 7210 ಕ್ರಮ ಸಂಖ್ಯೆಯ ಕಾರಿನಲ್ಲಿ ಬರುವಾಗ ಹಿಂದಿನಿಂದ ಬಂದ ಆಟೋ ಚಾಲಕ ತನ್ನ ವಾಹನವನ್ನ ಕಾರನ್ನ ಓವರ್ ಟೇಕ್ ಮಾಡಿ ಅಡ್ಡದಿಡ್ಡಿ ಚಲಿಸಿ  ಗೋಪಾಳದ ವಿನಾಯಕ ವೃತ್ತದ ಬಳಿ ಅಡ್ಡಕಟ್ಟಿದ್ದಾರೆ. 

ಚಾಲಕನನ್ನ ಕೆಳಗಿಳಿಸಿ ಸರಿಯಾಗಿ ವಾಹನ ಚಲಿಸು ಎಂದು ಅವ್ಯಚ್ಯ ಶಬ್ದಗಳಿಂದ ಬೈದಿದ್ದಾನೆ. ಆತನ ಜೊತೆ ಇರುವ ಮತ್ತೋರ್ವ ಚಾಕು ತೋರಿಸಿ ಶಿವಮೊಗ್ಗದಲ್ಲಿ ಹೇಗೆ ಓಡಾಡ್ತ್ಯಾ ನೋಡ್ತೀವಿ ಎಂದು ಧಮ್ಕಿ ಹಾಕಿದ್ದಾನೆ.  ನಂತರ ಕಾರಿನ ಚಾಲಕ ಶಿವಕುಮಾರ್ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ಹೇಳಿದ್ದಾನೆ.

ಸ್ಥಳೀಯರು ಈ ಜಗಳವನ್ನ ಬಿಡಿಸಿ ಕಳುಹಿಸಿದ್ದಾರೆ. ನಂತರ ಆಟೋ ಚಾಲಕನ ಬಗ್ಗೆ ಮಾಹಿತಿ ಪಡೆದು ಚಾಲಕ ಶಿವಕುಮಾರ್ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

Threatened with a knife

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close